ಸಚಿವ ಪ್ರಿಯಾಂಕ್ ಖರ್ಗೆಗೆ ಉಮೇಶ್ ಜಾಧವ್ ಸವಾಲು

ಕಲಬುರಗಿ: ತಾಕತ್ತಿದ್ದರೆ ಮುಂಬರುವ ಚಿಂಚೋಳಿ ಉಪ ಚುನಾವಣೆಗೆ ಪ್ರಿಯಾಂಕ್ ನಿಲ್ಲಲಿ. ನಮ್ಮ ಅಭ್ಯರ್ಥಿಯನ್ನು ಸೋಲಿಸಲಿ. ಒಂದು ಕೈ ನೋಡಿಯೇ ಬಿಡೋಣ ಎಂದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಶಾಸಕ ಉಮೇಶ್ ಜಾಧವ್ ಅವರು ಸಚಿವ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.

ಮಾಧ್ಯಮ ಜತೆ ಮಾತನಾಡಿದ ಜಾಧವ್ , ಮುಂಬರುವ ಉಪ ಚುನಾವಣೆಯಲ್ಲಿ ಚಿಂಚೊಳ್ಳಿ ಕ್ಷೇತ್ರದಿಂದ ಪ್ರಿಯಾಂಕ್ ನಿಂತು ಗೆಲ್ಲಲಿ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದಾರೆ. ದತ್ತು ಪುತ್ರನಾಗಿ ಚಿಂಚೋಳಿಗೆ ಬರಲು ಸಿದ್ಧವೆಂಬ ಸಚಿವ ಪ್ರೀಯಾಂಕ್ ಖರ್ಗೆ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ದತ್ತು ಪುತ್ರನಾಗಿ ಬರುವ ಬದಲು ರಾಜನಾಗಿ ಬರಲಿ. ಮುಂಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಸೋಲಿಸಲಿ, ಒಂದು ಕೈ ನೋಡಿಯೇ ಬಿಡೋಣ ಎಂದಿದ್ದಾರೆ.

ಹಾಗೆಯೇ ಪದೇ ಪದೇ ಆಪರೇಷನ್ ಕಮಲದ ಕುರಿತು ಪ್ರಿಯಾಂಕ್ ಅವರು ಮಾತನಾಡುವುದು ಸರಿಯಲ್ಲ. ನಾನು 50 ಲಕ್ಷ ಹಣ ಪಡೆದಿದ್ದೇನೆ ಎಂದು ಪ್ರಿಯಾಂಕ್ ಅವರ ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ. ನಾನು ತಪ್ಪು ಮಾಡಿಲ್ಲ. ಸಿಬಿಐ ಸೇರಿದಂತೆ ಯಾವುದೇ ಉನ್ನತ ತನಿಖೆಗೂ ನಾನು ಸಿದ್ಧ. ಸುಮ್ಮನೆ ಸುಳ್ಳು ಆರೋಪ ಮಾಡೋದು ಪ್ರಿಯಾಂಕ್ ಅವರಿಗೆ ಶೋಭೆತರಲ್ಲ. ಸುಳ್ಳು ಹೇಳಿ ಸಣ್ಣತನ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ