ಯುವಕನ ಭೀಕರ ಕೊಲೆ

ಚಿಕ್ಕಮಗಳೂರು,ಮಾ.13- ಮಾರಕಾಸ್ತ್ರಗಳಿಂದ ಇಂದು ಯುವಕನ ಭೀಕರ ಕೊಲೆ ಮಾಡಿರುವ ಘಟನೆ ತರೀಕೆರೆ ಪಟ್ಟಣದ ಗಣಪತಿ ಪೆಂಡಾಲ್ ಬಳಿ ನಡೆದಿದೆ.

ಅರುಣ್(23) ಕೊಲೆಯಾದ ನತದೃಷ್ಟ .

ರಾತ್ರಿ ಬೈಕ್‍ನಲ್ಲಿ ತೆರಳುತ್ತಿದ್ದಾಗ 4 ಜನರು ಈತನ ಮುಖಕ್ಕೆ ಖಾರದಪುಡಿ ಎರಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಮಾರಕಾಸ್ತ್ರಗಳಿಂದ ದೇಹದ ವಿವಿಧ ಭಾಗಗಳಿಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ದಾಂಡೆ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ತರೀಕೆರೆ ಹಾಗೂ ಬೀರೂರು ಪೊಲೀಸ್ ಠಾಣೆ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಅಪರಾಧಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು. ಪ್ರಕರಣದ ಸುಳಿವು ಸಿಕ್ಕಿದೆ. ಕೆಲವು ಮಾಹಿತಿ ಪ್ರಕಾರ ವೈಯಕ್ತಿಕ ದ್ವೇಷ ಮತ್ತು ಇತ್ತೀಚೆಗೆ ನಡೆದ ಜಾತ್ರೆಯಲ್ಲಿನ ಅಸಮಾಧಾನ ಕೊಲೆಗೆ ಕಾರಣ ಎಂದ ಊಹಿಸಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ