ಕೊಪ್ಪಳ ಲೋಕಸಭೆ ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಕರಡಿ ಸಂಗಣ್ಣ ಮತೊಮ್ಮೆ!

ಬೆಂಗಳೂರು, ಮಾರ್ಚ್‌ 13: ಬಿಜೆಪಿಯಲ್ಲಿ ಲೋಕಸಭೆ ಚುನಾವಣೆಗೆ ಕಸರತ್ತು ನಡೆಯುತ್ತಿದ್ದು, ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪರವರ ಡಾಲರ್ಸ್ ಕಾಲೋನಿ ದವಳಗಿರಿ ನಿವಾಸದಲ್ಲಿ ಕೋರ್ ಸಮಿತಿ ಸಭೆಗಳು ನಡೆಯುತ್ತಿವೆ

ಈಗಾಗಲೇ ಒಂದು ಅಭ್ಯರ್ಥಿ ಪಟ್ಟಿ ತಯಾರಾಗಿದ್ದು ಅದರಲ್ಲಿ ಕೊಪ್ಪಳದ ಕರಡಿ ಸಂಗಣ್ಣ ನವರು, ಮೈಸೂರಿನ ಪ್ರತಾಪ್ ಸಿಂಹ ರವರು, ಹಾಗು ಚಿಕ್ಕಬಳ್ಳಾಪುರದ ಬಚ್ಚೆ ಗೌಡರ ಹೆಸರುಗಳು ಇವೆ ಎಂದು ಸೂತ್ರಗಳು ತಿಳಿಸಿದ್ದಾರೆ. ಮೊದಲನೆಯ ಪಟ್ಟಿಯನ್ನು ಇನ್ನೊಂದೆರಡು ದಿನಗಳಲ್ಲಿ ಬಿಡುಗಡೆ ಮಾಡಿದ್ದು,  ಮಾರ್ಚ್‌ 18 ಕ್ಕೆ ಎಲ್ಲ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ