ಮಹಾರಾಷ್ಟ್ರ: ಮುರಿದುಬಿದ್ದ ಕಾಂಗ್ರೆಸ್-ವಿಬಿಎ ಮೈತ್ರಿ ಮಾತುಕತೆ

ಮುಂಬೈ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆ ಆಘಾತ ಉಂಟಾಗಿದೆ. ಕಾಂಗ್ರೆಸ್ ಜತೆ ಮೈತ್ರಿ ಮಾತುಕತೆ ಮುರಿದು ಬಿದ್ದಿದೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಕಾಂಗ್ರೆಸ್ ಜತೆಗಿನ ಮೈತ್ರಿ ಮುರಿದುಬಿದ್ದ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಎಲ್ಲ 48 ಲೋಕಸಭಾ ಸ್ಥಾನಗಳಿಗೂ ತಮ್ಮ ಪಕ್ಷ ವಂಚಿತ್ ಬಹುಜ್ ಅಘಾಡಿ(ವಿಬಿಎ) ಅಭ್ಯರ್ಥಿಗಳನ್ನು ಮಾರ್ಚ್ 15 ಪ್ರಕಟಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ವಿಬಿಎ 23 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದು, ಕಾಂಗ್ರೆಸ್‌-ಎನ್‌ಸಿಪಿ ಕೂಟಕ್ಕೆ 25 ಸ್ಥಾನಗಳನ್ನು ಮಾತ್ರ ಬಿಟ್ಟುಕೊಡಲು ಮುಂದಾಗಿತ್ತು. ಆದರೆ ಇದು ಕಾಂಗ್ರೆಸ್‌ಗೆ ಒಪ್ಪಿಗೆಯಾಗಿಲ್ಲ. ಅಷ್ಟೇ ಅಲ್ಲದೆ ಬಾರಾಮತಿ, ಯಾವತ್ಮಲ್‌ ಮತ್ತು ನಾಂದೇಡ್‌ನಂತಹ ಪ್ರಮುಖ ಕ್ಷೇತ್ರಗಳನ್ನು ವಿಬಿಎ ಕೇಳಿತ್ತು.

ತಾವು ಸೋಲಾಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಾಶ್ ಅಂಬೇಡ್ಕರ್‌ ಈಗಾಗಲೇ ಘೋಷಿಸಿದ್ದಾರೆ. ಪ್ರಕಾಶ್ ಅಂಬೇಡ್ಕರ್ ಅವರ ಪಕ್ಷ ಮಹಾರಾಷ್ಟ್ರದಲ್ಲಿ ಅಸಾದುದ್ದೀನ್ ಓವೈಸಿಯ ಎಐಎಂಐಎಂ ಜತೆ ಮೈತ್ರಿ ಹೊಂದಿದೆ.

lok sabha election,maharashtra, congress alliance with prakash ambedkar,fails

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ