ರೈತರೊಬರಿಗೆ ಕಾರು ಡಿಕ್ಕಿ-ಘಟನೆಯಲ್ಲಿ ರೈತನ ಸಾವು

ನೆಲಮಂಗಲ, ಮಾ.3- ಅತಿವೇಗವಾಗಿ ಬಂದ ಕಾರೊಂದು ಅಶ್ವಥಕಟ್ಟೆ ಮೇಲೆ ಹರಿದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮರಳುಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿರಯ್ಯನಪಾಳ್ಯದಲ್ಲಿ ನಡೆದಿದೆ.

ಕೃಷ್ಣಪ್ಪ (62) ಮೃತಪಟ್ಟ ರೈತ. ಗ್ರಾಮದ ಸಮೀಪವಿರುವ ಅಶ್ವಥಕಟ್ಟೆ ಮೇಲೆ ಕುಳಿತಿದ್ದಾಗ ತ್ಯಾಮಗೊಂಡ್ಲು ಕಡೆಯಿಂದ ವೇಗವಾಗಿ ಬಂದ ಇಂಡಿಕಾ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಘಟನೆಯಲ್ಲಿ ಕೃಷ್ಣಪ್ಪ ಅವರಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸುವಷ್ಟರಲ್ಲಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಈ ಸಂಬಂಧ ದಾಬಸ್‍ಪೇಟೆ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ