ಏರ್ ಸ್ಟ್ರೈಕ್ ಕುರಿತ ವಿಪಕ್ಷಗಳ ಪ್ರಶ್ನೆಗೆ ಪ್ರಧಾನಿ ಮೋದಿ ಕಿಡಿ

ನವದೆಹಲಿ: ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿ ಕುರಿತು ಪ್ರಶ್ನಿಸುತ್ತಿರುವ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ಭಾರತೀಯ ವಾಯುಪಡೆ ಉಗ್ರರ ವಿರುದ್ಧ ಕೈಗೊಂಡಿರುವ ಕಾರ್ಯಾಚರಣೆ ಕುರಿತು ಇಡೀ ವಿಶ್ವವೇ ನೋಡುತ್ತಿದೆ. ಆದರೆ ಕಾಂಗ್ರೆಸ್ ಹಾಗೂ ಮೈತ್ರಿಕೂಟಗಳಿಗೆ ಮಾತ್ರ ಸೇನೆಯ ಮೇಲೆ ನಂಬಿಕೆಯಿಲ್ಲ ಎಂದು ಕಿಡಿಕಾರಿದ್ದಾರೆ.

ಪಾಟ್ನಾದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ, ಭಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ಕುರಿತು ವಿರೋಧ ಪಕ್ಷಗಳು ಸಾಕ್ಷ್ಯಕೇಳಲು ಆರಂಭಿಸಿದ್ದಾರೆ. ಈ ಮೂಲಕ ಸೇನೆಯನ್ನು ವಿಪಕ್ಷಗಳು ಅವಮಾನಿಸುತ್ತಿವೆ. ವಿಪಕ್ಷಗಳ ಈ ರೀತಿಯ ಕೃತ್ಯಗಳು ಭದ್ರತಾ ಪಡೆಗಳ ಮನೋಬಲವನ್ನು ಕುಗ್ಗಿಸುವಂತದ್ದಾಗಿದೆ ಎಂದು ಗುಡುಗಿದರು.

ಕಾಂಗ್ರೆಸ್ ಹಾಗೂ ಮೈತ್ರಿಪಕ್ಷಗಳು ಭದ್ರತಾ ಪಡೆಗಳಿಗೆ ಅವಮಾನ ಮಾಡುತ್ತಿದ್ದಾರೆ. ಈ ಮೂಲಕ ಶತ್ರುರಾಷ್ಟ್ರದ ಬಲವನ್ನು ಹೆಚ್ಚುವಂತೆ ಮಾಡುತ್ತಿದ್ದಾರೆ ಎಂದರು. ಅಲ್ಲದೇ ನಾನು ಭಯೋತ್ಪಾಧನೆಯನ್ನು ತೊಡೆದುಹಾಕಲು ಯತ್ನಿಸುತ್ತಿದ್ದೇನೆ. ಆದರೆ ವಿಪಕ್ಷಗಳು ನನ್ನನ್ನೇ ಮುಗಿಸಲು ಹೊರಟಿವೆ ಎಂದರು.

ಇದೇ ವೇಳೆ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, ಕೆಚ್ಚೆದೆಯ ಸೈನಿಕರ ತ್ಯಾಗಗಳನ್ನು ಮೌನವಾಗಿ ಅಂಗೀಕರಿಸಲು ಭಾರತ ಈಗ ಮೊದಲಿನ ಹಾಗಲ್ಲ ಎಂದಿದ್ದಾರೆ.

PM Narendra modi,Patna,BJP Rally,Air Strike

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ