ಪಾಕ್ ಸಂಸದ ರಮೇಶ್ ಕುಮಾರ್- ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿ

ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪಾಕ್ ಸಂಸದ ಹಾಗೂ ಇಮ್ರಾನ್ ಖಾನ್ ಪಕ್ಷದ ಸದಸ್ಯ ರಮೇಶ್ ಕುಮಾರ್ ವಂಕ್ವಾನಿ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಸಹಾಯಕ ಸಚಿವ ವಿ.ಕೆ ಸಿಂಗ್ ಅವರನ್ನು ಭೇಟಿ ಮಾಡಿದರು.

ಕುಂಭಮೇಳದಲ್ಲಿ ಪಾಲ್ಗೊಳ್ಳಲು ರಮೇಶ್ ಕುಮಾರ್ ಭಾರತಕ್ಕೆ ಭೇಟಿ ಆಗಮಿಸಿದ್ದಾರೆ. ಪುಲ್ವಾಮಾ ದಾಳಿಗೆ ಮೊದಲೇ ರಮೇಶ್ ಕುಮಾರ್ ಭೇಟಿ ನಿಗದಿಯಾಗಿತ್ತು.

ಕುಂಭ ಮೇಳ 2019ಕ್ಕೆ 192 ದೇಶಗಳ ಪ್ರತಿನಿಧಿಗಳಿಗೆ ಭಾರತ ಸರಕಾರ ಆಹ್ವಾನ ನೀಡಿತ್ತು. ಭಾರತೀಯ ನಾಯಕರನ್ನು ಭೇಟಿ ಮಾಡಿದ ಬಳಿಕ ರಮೇಶ್ ಕುಮಾರ್ ಪಾಕಿಸ್ತಾನದ ಅಧಿಕೃತ ನೀತಿಯಂತೆ, ಪುಲ್ವಾಮಾ ದಾಳಿಯಲ್ಲಿ ತಮ್ಮ ದೇಶದ ಪಾತ್ರವಿಲ್ಲ ಎಂದು ಹೇಳಿದರು.

Pakistani MP meets PM Narendra Modi, Sushma Swaraj, offers to mediate

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ