ಏರ್ ಶೋ ಮೂಲಕ ಬೆಂಗಳೂರು ವಿಶ್ವದ ಗಮನ ಸೆಳೆದಿದೆ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ಬೆಂಗಳೂರು: ಏರ್ ಶೋ ಮೂಲಕ ಬೆಂಗಳೂರು ಭಾರತವನ್ನು ವಿಶ್ವದ ದಿಗ್ಗಜರ ಜೊತೆ ನಿಲ್ಲಿಸುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ದೇಶದ ಆದಾಯ ಮತ್ತು ಜಿಡಿಪಿಗೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇಂದಿನಿಂದ 5 ದಿನಗಳಕಾಲ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದು, ಏರ್ ಶೋ-2019ಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಬೆಂಗಳೂರಿಗರಿಗೆ ಏರೋ ಇಂಡಿಯಾ ಸಮಾರಂಭ ದೊಡ್ಡ ಹೆಮ್ಮೆಯಾಗಿದೆ ಎಂದರು.

ಕರ್ನಾಟಕ ಸರ್ಕಾರ ಮುಂದಿನ 5 ದಿನಗಲ್ಲಿ 50ಕ್ಕೂ ಹೆಚ್ಚು ಬಿ2ಬಿ ಮೀಟಿಂಗ್​ಗಳನ್ನು ನಡೆಸಲಿದೆ. 600 ಭಾರತೀಯ ಕಂಪನಿಗಳು ಮತ್ತು 400 ವಿದೇಶಿ ಕಂಪನಿಗಳು ಇದರಲ್ಲಿ ಭಾಗಿಯಾಗುತ್ತಿವೆ. ಏರೋ ಇಂಡಿಯಾ, ವಾಯುಯಾನ ಮತ್ತು ಅಂತರಿಕ್ಷಯಾನವನ್ನು ಇದೇ ಮೊದಲ ಬಾರಿಗೆ ಒಂದೆಡೆ ಸೇರಿಸಿದೆ. ಭಾರತವನ್ನು ವಿಶ್ವದ ದಿಗ್ಗಜರ ಜತೆ ನಿಲ್ಲಿಸುವ ಕೆಲಸವನ್ನು ಏರ್ ಶೋ ಮಾಡುತ್ತದೆ ಎಂದು ತಿಳಿಸಿದರು.

ಇಲ್ಲಿನ ವಾತಾವರಣ ವೈಮಾನಿಕ ಕ್ಷೇತ್ರದ ವಿಸ್ತರಣೆಗೆ ಪೂರಕವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ನವೋದ್ಯಮಿಗಳು ಹೆಚ್ಚು ಕಾರ್ಯನಿರತವಾಗಿದ್ದು, ವಿಶ್ವದಲ್ಲೇ ಎರಡನೇ ಸ್ಥಾನ ಪಡೆದಿದೆ ಎಂದರು.

ಮೇಕ್ ಇನ್ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಒತ್ತು ಕೊಟ್ಟಿದ್ದಾರೆ. 1,27,500 ಕೋಟಿ ರೂ. ಹಣವನ್ನು ರಕ್ಷಣಾ ಇಲಾಖೆ ಕಳೆದ 3-4 ವರ್ಷಗಳಲ್ಲಿ ಯುದ್ಧೋಪಕರಣಗಳ ಕೊಳ್ಳುವಿಕೆಗೆ ಖರ್ಚು ಮಾಡಿದೆ. ಇದು ನಮ್ಮ ದೇಶದ ವಹಿವಾಟಿಗೆ ಬಹುದೊಡ್ಡ ಬೆಂಬಲ ನೀಡಲಿದೆ ಎಂದು ಹೇಳಿದರು.

Aero India 2019, Yelahanka,Nirmala seetaraman

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ