ಕಾಶ್ಮೀರದಲ್ಲಿ ಭಾರೀ ಹಿಮಪಾತದ ನಡುವೆ 7 ಕಿ.ಮೀ. ವರೆಗೆ ಗರ್ಭಿಣಿಯನ್ನು ಸ್ಟ್ರೆಚರ್ ನಲ್ಲಿ ಹೊತ್ತು ಆಸ್ಪತ್ರೆ ಸಾಗಿಸಿದ ಯುವಕರು

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಮೊಣಕಾಲಿನ ವರೆಗೆ ಹೂತುಹೋಗುವ ಹಿಮದ ರಾಶಿ ಮೇಲೆ ಗರ್ಭಿಣಿಯನ್ನು ಸುಮಾರು 7 ಕಿ.ಮೀ. ವರೆಗೆ ಹೊತ್ತು ಯುವಕರು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ಕಾಶ್ಮೀರದಲ್ಲಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದ್ದು, ರಸ್ತೆಗಳು ಹಿಮದಿಂದ ಆವೃತಗೊಂಡು ಸಂಚಾರಕ್ಕೆ ತಡೆಯುಂಟಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ ಮಧ್ಯೆ ಉತ್ತರ ಕಾಶ್ಮೀರದಲ್ಲಿ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಬಂದಿದ್ದ ಆಂಬುಲೆನ್ಸ್‌ ಮಾರ್ಗ ಮಧ್ಯೆಯೇ ಹಿಮದಟ್ಟಣೆಗೆ ಸಿಲುಕಿತ್ತು. ಅನಿವಾರ್ಯವಾಗಿ ಮೊಣಕಾಲಿನ ವರೆಗೆ ಹೂತುಹೋಗುವ ಹಿಮರಾಶಿಯ ಮೇಲೆ ಗರ್ಭಿಣಿಯನ್ನು ಸ್ಟ್ರೆಚರ್‌ ಮೂಲಕ ಯುವಕರು ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಭಾರಿ ಹಿಮಪಾತದಿಂದ ಮತ್ತು ರಸ್ತೆಗಳು ಬ್ಲಾಕ್‌ ಆಗಿದ್ದರಿಂದ ಸರಿಯಾದ ಸ್ಥಳಕ್ಕೆ ಆಂಬುಲೆನ್ಸ್‌ ಕಳುಹಿಸಲು ಸಾಧ್ಯವಾಗಲಿಲ್ಲ. ಆದರೆ ಕೆಲವು ಯುವಕರು ಗರ್ಭಿಣಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿ ಫಾರೂಕ್‌ ಶೈಕ್‌ ಗ್ರೇಟರ್‌ ಕಾಶ್ಮೀರ್‌ಗೆ ತಿಳಿಸಿದ್ದಾರೆ.

jammu and kashmir pregnant woman carried by youth upto 7km in knee deep snow

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ