ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದ್ದು, ಭದ್ರತಾ ಪಡೆಗಳು ಉಗ್ರರ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇಲ್ಲಿನ ಕುಲಗಾಮ್ನಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ಗೆ ಐವರು ಉಗ್ರರು ಬಲಿಯಾಗಿದ್ದಾರೆ.
ಉಗ್ರರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಸಿಆರ್ಪಿಎಫ್ ಸಿಬ್ಬಂದಿ, ರಾಷ್ಟ್ರೀಯ ರೈಫಲ್ಸ್ ಸಿಬ್ಬಂದಿ ಜಂಟಿಯಾಗಿ ಬೆಳಗ್ಗೆ 6ಗಂಟೆಯಿಂದಲೇ ಶೋಧ ಕಾರ್ಯಾಚರಣೆ ನಡೆಸಿತ್ತು. ಮಧ್ಯಾಹ್ನ 12ಗಂಟೆಯಷ್ಟೊತ್ತಿಗೆ ಎಲ್ಲ ಐವರು ಉಗ್ರರನ್ನೂ ಹತ್ಯೆಗೈಯ್ಯಲಾಗಿದೆ. ಅವರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾಧಿಕಾರಿ ರಾಜೇಶ್ ಖಾಲಿಯಾ ತಿಳಿಸಿದ್ದಾರೆ.
ಆರಂಭದಲ್ಲಿ 2-3 ಉಗ್ರರು ಅಡಗಿರಬಹುದೆಂದು ಭದ್ರತಾ ಪಡೆಗಳು ಅಂದಾಜಿಸಿದ್ದವು. ಆದರೆ ಐವರು ಉಗ್ರರು ಸ್ಥಳದಲ್ಲಿ ಬೀಡುಬಿಟ್ಟಿದ್ದರು. ಎನ್ಕೌಂಟರ್ ಕಾರ್ಯಾಚರಣೆ ಶುರುವಾದ ಕೂಡಲೇ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಉಗ್ರರು ಸ್ಥಳೀಯರೇ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Five militants killed in encounter with security forces in J-K’s Kulgam