ಸರಗಳ್ಳರಿಂದ ಮಹಿಳೆಯ ಸರ ಅಪಹರಣ

ಬೆಂಗಳೂರು, ಫೆ.7-ಮನೆ ಸಮೀಪವೇ ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಹಿಂಬಾಲಿಸಿ ಬೈಕ್‍ನಲ್ಲಿ ಬಂದ ಸರಗಳ್ಳರು 40 ಗ್ರಾಂ ಸರ ಎಗರಿಸಿರುವ ಘಟನೆ ಸಂಜಯನಗರ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿನಡೆದಿದೆ.

ಎಇಸಿಎಚ್ ಲೇಔಟ್ ನಿವಾಸಿ ವತ್ಸಲಾಎಂಬುವರು ನಿನ್ನೆ ಸಂಜೆ 6.45ರಲ್ಲಿ ಮನೆ ಮುಂದೆಯೇ ವಾಯುವಿಹಾರ ಮಾಡುತ್ತಿದ್ದರು. ಈ ವೇಳೆ ಇಬ್ಬರು ಸರಗಳ್ಳರು ಈರಸ್ತೆಯಲ್ಲಿ ಸಂಚರಿಸುತ್ತ ಸಮಯ ಸಾಧಿಸಿ ವತ್ಸಲಾಅವರ ಕೊರಳಲ್ಲಿದ್ದ 40 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.
ಈ ಘಟನೆ ನಡೆದ ಕೆಲವೇ ನಿಮಿಷಗಳ ಅಂತರದಲ್ಲಿಇದೇ ವ್ಯಾಪ್ತಿಯಲ್ಲಿ ಮತ್ತೊಬ್ಬ ಮಹಿಳೆ ಸರ ಎಗರಿಸಿದ್ದು, ಇದನ್ನು ಗಮನಿಸಿದರೆ ವತ್ಸಲಾಅವರ ಸರಎಗರಿಸುವವರೇ ಈ ಸರ ಕಳ್ಳತನ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಮಂಜುಳಾ ಎಂಬುವರುದೇವಸ್ಥಾನಕ್ಕಾಗಿ ಸಂಜೆ 7.30ರಲ್ಲಿ ನಡೆದು ಹೋಗುತ್ತಿದ್ದಾಗ ಎನ್‍ಜಿಇಎಫ್ ಲೇಔಟ್, ರಾಘವೇಂದ್ರ ಮಠದ ಬಳಿ ಬೈಕ್‍ನಲ್ಲಿ ಹಿಂಬಾಲಿಸಿ ಬಂದಇಬ್ಬರು ಸರಗಳ್ಳರು 60 ಗ್ರಾಂ ಸರ ಎಗರಿಸಿದ್ದಾರೆ.ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ.
ಈ ಬಗ್ಗೆ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಸಂಜಯ ನಗರಠಾಣೆ ಪೆÇಲೀಸರು ಸರಗಳ್ಳರಿಗಾಗಿ ಶೋಧಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ