ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಇಂಜನಿಯರ್

ಕುಣಿಗಲ್, ಫೆ.7-ನೂತನ ಮನೆಗೆ ವಿದ್ಯುತ್ ಸಂಪರ್ಕಕಲ್ಪಿಸಲು ಲಂಚ ಪಡೆಯುತ್ತಿದ್ದ ವೇಳೆ ಬೆಸ್ಕಾಂ ಕಿರಿಯಅಭಿಯಂತರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೆ.ಟಿ.ಶಂಕರ್ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಕಿರಿಯಅಭಿಯಂತರ.

ಈತ ಹುಲಿಯೂರುದುರ್ಗ ವಿಭಾಗದ ಸಂತೆಮಾವತ್ತೂರಿನಲ್ಲಿ ವಿಭಾಗೀಯ ಅಧಿಕಾರಿಯಾಗಿ ಕರ್ತವ್ಯ ಮಾಡುತ್ತಿದ್ದು, ಕಸಬಾ ಹೋಬಳಿ ದೊಡ್ಡೇಗೌಡನ ಪಾಳ್ಯದ ಚಂದುಎಂಬುವರು ನೂತನವಾಗಿ ಮನೆ ನಿರ್ಮಾಣ ಮಾಡಿದ್ದು, ಮನೆಗೆ ವಿದ್ಯುತ್ ಸಂಪರ್ಕಕಲ್ಪಿಸಲುಅರ್ಜಿ ಸಲ್ಲಿಸಿದ್ದರು.ಆದರೆ ಶಂಕರ್ ಹಣಕ್ಕಾಗಿ ಬೇಡಿಕೆಇಟ್ಟಿದ್ದು, ಹಣ ನೀಡುವುದಾಗಿ ಚಂದ್ರು ಒಪ್ಪಿಕೊಂಡಿದ್ದರು.

ಚಂದ್ರು ನಿನ್ನೆ ಸಂಜೆ ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ 6 ಸಾವಿರ ಹಣ ನೀಡುತ್ತಿದ್ದಾಗ ಎಸಿಬಿಯ ಇನ್ಸ್‍ಪೆಕ್ಟರ್ ಹಾಲಪ್ಪ ಮತ್ತುತಂಡ ದಾಳಿ ನಡೆಸಿ 6 ಸಾವಿರ ನಗದು ವಶಕ್ಕೆ ಪಡೆದು ಶಂಕರ್‍ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ