ಸುಪ್ರೀಂ ಆದೇಶ ಸ್ವಾಗತಿಸಿದ ಮಮತಾ ಬ್ಯಾನರ್ಜಿ: ಪ್ರತಿಭಟನೆ ವಾಪಸ್

ಕೋಲ್ಕತ್ತಾ: ಶಾರದಾ ಚಿಟ್‌ಫಂಡ್ ಹಗರಣದ ತನಿಖೆಗೆ ಸಿಬಿಐ ಮುಂದೆ ಹಾಜರಾಗಿ ಪೂರ್ಣ ಸಹಕಾರ ನೀಡುವಂತೆ ಕೋಲ್ಕತಾ ಪೊಲೀಸ್ ಹೈಕಮಿಷನರ್‌ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಕುಮಾರ್ ಅವರನ್ನು ಬಂಧಿಸದಂತೆ ಸಿಬಿಐಗೂ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದು, ಧರಣಿ ಪ್ರತಿಭಟನೆ ವಾಪಸ್‌ ಪಡೆದಿದ್ದಾರೆ.

ಸಿಬಿಐ ವಿಚಾರಣೆ ನಡೆಸಬಹುದೇ ಹೊರತು ಪೊಲೀಸ್ ಅಧಿಕಾರಿಗಳನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ತಮ್ಮ ಹೋರಾಟಕ್ಕೆ ಸಂದ ಜಯ ಎಂದು ಮಮತಾ ಹೇಳಿಕೊಂಡಿದ್ದಾರೆ.

ನ್ಯಾಯಾಂಗಕ್ಕೆ ನಾವು ಋಣಿಯಾಗಿದ್ದೇವೆ. ಇದರಿಂದ ಅಧಿಕಾರಿಗಳ ನೈತಿಕ ಸ್ಥೈರ್ಯ ಬಲಪಡಿಸಿದಂತಾಗಿದೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟುಮಾಡಿದೆ. ಅಧಿಕಾರಿಗಳನ್ನು ಬೆದರಿಸಿ ಬಂಧಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶ ನಮಗೆ ಸಂದ ನೈತಿಕ ಜಯ ಎಂದು ಮಮತಾ ಪುನರುಚ್ಚರಿಸಿದ್ದಾರೆ.

Supreme Court order,Mamata Banerjee,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ