ಅಮಿತ್ ಶಾ ದೊಡ್ಡ ಭ್ರಷ್ಟ ಹಾಗೂ ಬಿಜೆಪಿ ದೇಶದ ಅತಿ ದೊಡ್ಡ ಭ್ರಷ್ಟ ಪಕ್ಷ

ನವದೆಹಲಿ: ದೇಶದಲ್ಲೇ ಬಿಜೆಪಿ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅತೀ ಭ್ರಷ್ಟರು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಅವರದೇ ಆಡಳಿತವಿರುವಾಗಲೇ ನೀರವ್‌ ಮೋದಿ, ಮೇಹುಲ್ ಚೊಕ್ಸಿಯಂತ ಕಳ್ಳರು ಸಾವಿರಾರು ಕೋಟಿ ರೂ. ಬ್ಯಾಂಕ್‌ನಿಂದ ಲೂಟಿ ಮಾಡಿ ನಮ್ಮ ದೇಶ ಬಿು ತೊಲಗಿದ್ದಾರೆ. ರಾಫೆಲ್‌ ಹಗರಣದಲ್ಲೂ ಬಿಜೆಪಿ ನಾಯಕರೆ ಹೊಣೆಗಾರರು. ಇಷ್ಟಿದ್ರೂ ಬಿಜೆಪಿ ಬೇರೆಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಬಿಜೆಪಿ ಮತ್ತು ಅದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇಡೀ ದೇಶದಲ್ಲಿ ಅತ್ಯಂತ ಭ್ರಷ್ಟರು ಎಂದರು.

ಈಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಆದ್ರೂ ಪ್ರತಿಯೊಂದಕ್ಕೂ ಬೇರೆಯವರ ಮೇಲೆ ಆರೋಪಿಸೋದು ಸರಿಯಲ್ಲ. ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇವೆ ಅಂತ ಬಿಜೆಪಿ ಹೇಳುತ್ತೆ. ಆದ್ರೇ, ನಾವು ಮೋದಿಯ ವಿರೋಧಿಗಳಲ್ಲ. ಪ್ರಧಾನಿಯಾಗಿ ಅವರ ನೀತಿಗಳು ಮತ್ತು ನಡೆಯನ್ನಷ್ಟೇ ನಾವು ವಿರೋಧಿಸುತ್ತೇವೆ.

Chandrababu naiydu, amith shah

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ