ತಂಗಿಯನ್ನು ಬಸ್ ಹತ್ತಿಸಲು ಬಂದಿದ್ದ ಅಣ್ಣ ಬಸ್‍ಗೆ ಸಿಲುಕಿ ಸಾವು

ದೊಡ್ಡಬಳ್ಳಾಪುರ, ಫೆ.3- ಸಹೋದರಿಯನ್ನು ಬಸ್ ಹತ್ತಿಸಲು ಬಂದಿದ್ದ ಅಣ್ಣ ಸಾರಿಗೆ ಬಸ್‍ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಅರದೇಶನಹಳ್ಳಿ ಗೇಟ್ ಬಳಿ ನಡೆದಿದೆ.

ಜಾಲಿಗೆ ನಿವಾಸಿ ನಿತೀಶ್ (17) ಮೃತಪಟ್ಟ ದುರ್ದೈವಿ.ಇಂದು ಬೆಳಗ್ಗೆ ತಂಗಿಯನ್ನು ಬಸ್‍ಗೆ ಬಿಡಲೆಂದು ಬೈಕ್‍ನಲ್ಲಿ ಬಂದಿದ್ದು, ಬಸ್ ನಿಲ್ದಾಣದಲ್ಲಿ ತಂಗಿಯನ್ನು ಬಿಟ್ಟು ವಾಪಸ್ ರಸ್ತೆ ದಾಟುತ್ತಿದ್ದಾಗ ಗೌರಿಬಿದನೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ಬಸ್‍ನ ಕೆಳಗೆ ಸಿಲುಕಿಕೊಂಡಿದ್ದು, ಕೂಡಲೇ ಆತನನ್ನು ರಕ್ಷಿಸಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ಪೆಗೆ ಕಳುಹಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಈ ಸಂಬಂಧ ರಾಜಾನುಕುಂಟೆ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ