ಬಂದೋಬಸ್ತ್ ನಡುವೆ ನಡೆದ ಶಿಕ್ಷಕರ ಅರ್ಹತಾ ಒರೀಕ್ಷೆ

ಕೋಲಾರ, ಫೆ.3-ಶಿಕ್ಷಕರ ಅರ್ಹತಾ ಪರೀಕ್ಷೆಯು ನಗರದ 13 ಕೇಂದ್ರಗಳಲ್ಲಿ ಬಂದೋಬಸ್ತ್ ನಡುವೆ ನಡೆಯಿತು.

ಒಂದನೇ ತರಗತಿಯಿಂದ 5ನೇ ತರಗತಿಗೆ ಉಪಾಧ್ಯಾಯರಾಗಲು ಬಯಸುವ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ 1ನ್ನು ಮತ್ತು 6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಬಯಸುವವರು 2ನೇ ಪ್ರಶ್ನೆಪತ್ರಿಕೆ ಬರೆದಿದ್ದಾರೆ.

ಮೊದಲ ಪ್ರಶ್ನೆ ಪತ್ರಿಕೆಗೆ 2,305 ಅಭ್ಯರ್ಥಿಗಳು ಮತ್ತು 2ನೇ ಪತ್ರಿಕೆಗೆ 3,770 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ನಗರದ ಬಾಲಕಿಯರ ಜ್ಯೂನಿಯರ್ ಕಾಲೇಜಿನ ಮೈದಾನದಲ್ಲಿ ಎಂವಿಕೆ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯುತ್ತಿರುವುದರಿಂದ ಅಲ್ಲಿ ನಡೆಯಬೇಕಾಗಿದ್ದ ಸಿಇಟಿ ಪರೀಕ್ಷಾ ಕೇಂದ್ರವನ್ನು ಎದುರಿಗೆ ಇರುವ ಬಾಲಕರ ಪ್ರಥಮ ದರ್ಜೆ ಕಾಲೇಜಿಗೆ ಸ್ಥಳಾಂಥರಿಸಿದ್ದು, ವಿದ್ಯಾರ್ಥಿಗಳು ಪರದಾಡಿ ಕೊಠಡಿಗಳನ್ನು ಹುಡುಕಾಡಿ ಪರೀಕ್ಷೆ ಬರೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ