ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಿ: ನಿಟ್ಟೆಗೆ ಜಯ

ಬೆಂಗಳೂರು: ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಬಾಲಕಿಯರ ನಿಟ್ಟೆ ತಂಡ ನಗರದ ಮೌಂಟ್ ಕಾರ್ಮಲ್ ಕಾಲೇಜಿ ವಿರುದ್ದ 47-39 ಅಂಕಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.

ಇಲ್ಲಿನ ಬೀಗಲ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಲಕ ಬಾಲಕಿಯರ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ನಿಟ್ಟೆ ತಂಡದ ಕೀರ್ತಾನಾ ಸೊಗಸಾದ ಆಟ ಪ್ರದರ್ಶಿಸಿ 267 ಅಂಕಗಳನ್ನ ಸಂಪಾದಿಸಿದರು.

ಪಂದ್ಯದ ಮೊದಲಾರ್ಧದಲ್ಲಿ ನಿಟ್ಟೆ ತಂಡ ಮುನ್ನಡೆ ಪಡೆದಿತ್ತು. ಮೂರು ಮತ್ತು ನಾಲ್ಕನೆ ಕ್ವಾರ್ಟರ್‍ನಲ್ಲಿ ಭಾರೀ ಪೈಪೋಟಿ ನೀಡಿದ ಮೌಂಟ್ ಕಮಾಲ್ ತಂಡದ ಆಟಗಾರ ಗೊಮೆಧಾ ಅವರ ಹತ್ತು ಅಂಕಗಳ ನೆರವಿನಿಂದ ಅಮೋಘ ಆಟ ಪ್ರದರ್ಶಿಸಿ ಮುನ್ನಡೆ ಪಡೆಯಿತು. ನಂತರ ಅವಧಿಯಲ್ಲಿ ಮಂಗಳೂರು ತಂಡ ಆತ್ಮವಿಶ್ವಾಸದಿಂದ ಕಣಕ್ಕಿಳಿದು ಎಂಟುಗಳನ್ನ ಪಡೆದು ವಿಜಯಿಯಾಯಿತು.
ಇತರೆ ಪಂದ್ಯಗಳ ಫಲಿತಾಂಶ

ಬಾಲಕರ ವಿಭಾಗ
ಬಿಎಂಎಸ್‍ಸಿಇ ತಂಡ ನ್ಯೂ ಹರಿಜಾನ್ ವಿರುದ್ಧ ಸಾಯಿ 78- 18 ಗೆಲುವು
ಎಂಎಸ್‍ಆರ್‍ಟಿ ಸುರಾನಾ ಕಲೇಜ್ ವಿರುದ್ದ 74-70 ಗೆಲುವು
ಬಾಲಕಿಯರ ವಿಭಾಗ
ನ್ಯೂ ಹರಿಜಾನ್‍ಗೆ ಕ್ರೈಸ್ಟ್ ಯುನಿವರ್ಸಿಟಿ ವಿರುದ್ಧ 47-39 ಗೆಲುವು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ