2020ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ

ನವದೆಹಲಿ: 2020ನೇ ಸಾಲಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪುರುಷ ಮತ್ತು ಮಹಿಳಾ ಐಸಿಸಿ ಟಿ20 ವಿಶ್ವಕಪ್​ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ, ಒಂದೇ ದೇಶದಲ್ಲಿ ಮಹಿಳಾ ಮತ್ತು ಪುರುಷರ ಟೂರ್ನಮೆಂಟ್​ ಸ್ವತಂತ್ರವಾಗಿ ನಡೆಯಲಿದೆ.

2020ರ ಫೆ.21 ರಿಂದ ಆರಂಭವಾಗುವ ಮಹಿಳೆಯರ ಟೂರ್ನಿ ಮಾರ್ಚ್ 8 ರಂದು ಕೊನೆಗೊಳ್ಳಲಿದೆ. ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ಪುರುಷರ ವಿಭಾಗದ ಟೂರ್ನಿ ನಡೆಯಲಿದೆ. ಎರಡು ಟೂರ್ನಿಗಳು ಆಸ್ಟ್ರೇಲಿಯಾದ್ಯಂತ ಎಂಟು ಆತಿಥೇಯ ನಗರಗಳ 13 ಸ್ಥಳಗಳಲ್ಲಿ ನಡೆಯಲಿದೆ.

ಭಾರತದ ಪುರುಷ ಟೂರ್ನಿಯ ಮೊದಲ ಪಂದ್ಯ ಅಕ್ಟೋಬರ್​ 24 ರಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ತಂಡವನ್ನು ಟೀಂ ಇಂಡಿಯಾ ಎದುರಿಸಲಿದ್ದು, ಪರ್ತ್​ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮಹಿಳಾ ವಿಭಾಗದ ಮೊದಲ ಪಂದ್ಯ ಫೆ.21 ರಂದು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.

ICC Reveals Men’s, Women’s T20 World Cup 2020 Fixtures

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ