ಹರಿಯಾಣಾ ಮಾಜಿ ಸಿಎಂ ಭೂಪೇಂದ್ರ ಸಿಂಗ್​ ಹೂಡಾ ನಿವಾಸದ ಮೇಲೆ ಸಿಬಿಐ ದಾಳಿ

ರೋಹ್ಟಕ್​: ಗುರುಗ್ರಾಮ್​ನ ಭೂ ಹಗರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಮಾಜಿ ಸಿಎಂ ಭೂಪೇಂದ್ರ ಸಿಂಗ್​ ಹೂಡಾ ಅವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

2009, ಜೂನ್​ 2ರಂದು ಭೂಸ್ವಾಧೀನ ಕಾಯ್ದೆಯ ಸೆಕ್ಷನ್​ 4ರಂತೆ ನಾಗ್ಲಿ ಉಮರ್​ಪುರ್​, ಉಲ್ಲಾವಾಸ್​, ಕದರ್ಪುರ್​, ಮೈದಾವಸ್​, ಬಾದ್​ಶಪುರ್​ ಹಾಗೂ ಘಾಟಾದಲ್ಲಿರುವ ಭೂಮಿಯನ್ನು ವಶಪಡಿಸಿಕೊಳ್ಳಲು ಆಗಿನ ಕಾಂಗ್ರೆಸ್​ ಸರ್ಕಾರ ಆದೇಶ ನೀಡಿತ್ತು. ಆದರೆ 2011 ಡಿಸೆಂಬರ್​ 22ರಂದು ಭೂಸ್ವಾಧೀನ ಅಧಿಕಾರಿ 87 ಎಕರೆ ಮಾತ್ರ ಮಂಜೂರು ಮಾಡಿದ್ದರು. ಆದಾಗ್ಯೂ ಒಟ್ಟಾರೆ 1407 ಎಕರೆ ಭೂಮಿಯಲ್ಲಿ ಶೇ.95ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಸುಪ್ರೀಂಕೋರ್ಟ್ 2017 ನವೆಂಬರ್​ 1ರಂದು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಹೂಡಾ ಸೇರಿ 33 ಮಂದಿ ವಿರುದ್ಧ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೀಗ ಇದೇ ಪ್ರಕರಣ ಸಂಬಂಧ ಹೂಡ ಮನೆ ಮೇಲೆ ದಾಳಿ ನಡೆದಿದ್ದು, ದೆಹಲಿ ಸೇರಿದಂತೆ 30 ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.

CBI raids former Haryana CM BS Hooda’s house in land scam case

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ