ದೇವರ ಅವತಾರಿಗಳೆ ಶರಣರು: ಜಿ.ಪಂ. ಅಧ್ಯಕ್ಷೆ ವೀಣಾ

ಬಾಗಲಕೋಟೆ: ಮಾನವ ಜನಾಂಗಕ್ಕೆ ಕಾಯಕ, ದಾಸೋಹ ಸತ್ಯ ನಿಷ್ಠೆಯಿಂದ ನಡೆಯಲು ಆ ದೇವನೇ 12ನೇ ಶತಮನದಲ್ಲಿ ಶರಣರ ಅವತಾರದಲ್ಲಿ ಬಂದಿದ್ದರು ಎಂದು ಜಿ.ಪಂ.ಅಧ್ಯಕ್ಷೆ ವೀಣಾ ಕಾಶಪವರ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಹದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯ ಜನರು ಮಾತನಾಡುವ ನುಡಿಗಳೆಲ್ಲ ಮಾತುಗಳಾದರೆ ಶರಣರು ಆಡಿದ ಮಾತು ವಚನಗಳಾಗಿ ಸನ್ಮಾರ್ಗ ತೋರುವ ಮೈಲುಗಳಾಗಿವೆ ಎಂದರು.

ಉಪನ್ಯಾಸಕ ಈಶ್ವರ ಮಾತನಾಡಿ, ಇಂದಿನ ಲೋಕೋಪಯೋಗಿ ಕಾರ್ಯಳನ್ನ 12ನೇ ಶತಮಾನದಲ್ಲಿ ಸಿದ್ದರಾಮ ಶಿವಯೋಗಿ ತೋರಿಸಿ ಕೊಟ್ಟಿದ್ದರು ಎಂದು ಹೇಳಿದರು.

ಸಮಾಜದ ಮುಖಂಡ ಅಶೋಕ ಲಿಂಬಾವಳಿ, ಸಮಾಜ ಭಾಂದವರು ಶಿಕ್ಷಣ ಪಡೆಯಬೇಕು. ಸಮಾಜದ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದಂತೆ ಹಿರಿಯರು ಅವರಿಗೆ ದಾರಿ ತೋರಿಸಿದಾಗ ಸಿದ್ದರಾಮೇಶ್ವರ ಜಯಂತಿ ಸಾರ್ಥಕ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರು ಕುಂಭ ಮತ್ತು ಸಾಂಸ್ಕøತಿಕ ಕಲಾತಂಡಗಳ ಆಕರ್ಷಕ ಮೆರವಣಿಗೆ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಅಪಾರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಮಾಜ ಪ್ರಮುಖರಾದ ಲಕ್ಷ್ಮಣ ಬೆನಕ್ಕಟ್ಟಿ, ತಿಪ್ಪಣ್ಣ ವಡ್ಡರ, ಲಕ್ಷ್ಮಣ ಲ.ವಡ್ಡರ,ಯಲ್ಲಪ್ಪ ಪಾತ್ರೋಟ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಪ್ರಭು ರಾಜ ಹೀರೇ ಮಠ, ಕೃಷಿ ಇಲಾಖೆಯ ಉಪನಿರ್ದೇಶಕ ಕೊಂಗವಾಡ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ