ತುರ್ತು ಪರಿಸ್ಥಿತಿ ಘೋಷಿಸುವ ಬೆದರಿಕೆ ಪುನರುಚ್ಚರಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್‍ಟನ್, ಜ.11- ಅಕ್ರಮ ವಲಸೆ ತಡೆಯಲು ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಬಿಗಿ ಪಟ್ಟು ಹಿಡಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತು ಪರಿಸ್ಥಿತಿ ಘೋಷಿಸುವ ಬೆದರಿಕೆಯನ್ನು ಇಂದು ಪುನರುಚ್ಚರಿಸಿದ್ದಾರೆ.

ತುರ್ತು ಪರಿಸ್ಥಿತಿ ಘೋಷಣೆಗೆ ತುದಿಗಾಲಲ್ಲಿ ನಿಂತಿರುವ ಟ್ರಂಪ್, ಈ ವಿಷಯದಲ್ಲಿ ಯಾವುದೇ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.
ತುರ್ತು ಪರಿಸ್ಥಿತಿ ಘೋಷಣೆಯಾದರೆ ಮೆಕ್ಸಿಕೋ-ಅಮೆರಿಕ ಗಡಿ ಭಾಗದಲ್ಲಿ ಕಾಂಕ್ರಿಟ್ ಅಥವಾ ಉಕ್ಕಿನ ಗೋಡೆ ನಿರ್ಮಾಣ ಮಾಡುವ ತಮ್ಮ ಉದ್ದೇಶ ಸಾಕಾರಗೊಳ್ಳಲು ಟ್ರಂಪ್‍ಗೆ ಪರಮಾಧಿಕಾರ ಲಭಿಸಿದಂತಾಗುತ್ತದೆ.

ಗಡಿಗೋಡೆ ನಿರ್ಮಾಣಕ್ಕೆ ಹಣಕಾಸು ಮಂಜೂರು ಮಾಡುವಂತೆ ಕೋರಿ ಟ್ರಂಪ್ ಸಲ್ಲಿಸಿದ್ದ ಮನವಿಗೆ ಸಂಸತ್‍ನಲ್ಲಿ ಡೆಮೊಕ್ರಾಟಿಕ್ ಪಕ್ಷ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಅಲ್ಲದೆ, ಟ್ರಂಪ್ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಅಮೆರಿಕ ಅಧ್ಯಕ್ಷರು ಕೆಂಡಾಮಂಡಲರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ