ಐಟಿ ದಾಳಿ ಮುಗಿದರೂ ನಟರಿಗೆ ತಪ್ಪದ ಸಂಕಷ್ಟ

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟರ ನಿವಾಸದಲ್ಲಿ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಇಂದು ನಸುಕಿನ ಜಾವ ನಿರ್ಗಮಿಸಿದ್ದಾರೆ.

ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್ ಅವರ ಮನೆಯಲ್ಲಿ ಈಗಾಗಲೇ ಐಟಿ ದಾಳಿ ಮುಗಿದಿದೆ. ಆದರೆ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಟಾರ್ ನಟರ ಕುಟುಂಬದ ಆಸ್ತಿಪಾಸ್ತಿಗೆ ಸಂಬಂಧಿಸಿದ ಆಸ್ತಿ ದಾಖಲೆಗಳು ಐಟಿ ವಶದಲ್ಲಿದೆ. ಅಲ್ಲದೇ ಬ್ಯಾಂಕ್ ಖಾತೆ, ಲಾಕರ್ ಗಳಲ್ಲಿಟ್ಟಿರುವ ಚಿನ್ನಾಭರಣಗಳ ದಾಖಲೆಗಳನ್ನು ಕೂಡ ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಅಧಿಕಾರಿಗಳು ಇನ್ಮುಂದೆ ವಿಚಾರಣೆಗೆ ಬನ್ನಿ ಎಂದು ಹೇಳಿದಾಗಲೆಲ್ಲಾ ಸ್ಟಾರ್ ನಟರು ಐಟಿ ಆಫೀಸ್‍ಗೆ ಹೋಗಬೇಕಾಗಿದೆ. ಆಸ್ತಿಪಾಸ್ತಿ ಬಗ್ಗೆ ಸ್ಟಾರ್ ನಟರು ಹಾಗೂ ಅವರ ಕುಟುಂಬಸ್ಥರು ಪದೇ ಪದೇ ವಿಚಾರಣೆಗೆ ಹಾಜರಾಗಿ ತಮ್ಮ ಆದಾಯದ ಮಾಹಿತಿಯನ್ನು ನೀಡಬೇಕಾಗುತ್ತದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ