ನವದೆಹಲಿ: ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ)ದ ಮುಖ್ಯ ಮಾಹಿತಿ ಆಯುಕ್ತರಾಗಿ ಸುದೀರ್ ಭಾರ್ಗವ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ ಭಾರ್ಗವ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತಿತರರು ಭಾರ್ಗವ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಾಮಾಜಿಕ ನ್ಯಾಯ ಸಚಿವಾಲಯದ ಮಾಜಿ ಕಾರ್ಯದರ್ಶಿಯಾಗಿದ್ದ ಭಾರ್ಗವ ಕೇಂದ್ರ ಮಾಹಿತಿ ಆಯೋಗದ ಮಾಹಿತಿ ಆಯುಕ್ತರಾಗಿ ಈ ಹಿಂದೆ ಭಾರ್ಗವ ಸೇವೆ ಸಲ್ಲಿಸಿದ್ದರು.
ಇವರಲ್ಲದೇ, ಹಿರಿಯ ನಿವೃತ್ತ ಅಧಿಕಾರಿಗಳಾದ ಯಶ್ ವರ್ದನ್ ಕುಮಾರ್ ಸಿನ್ಹಾ, ವನಜಾ ಎನ್ ಸರ್ನಾ, ನೀರಜ್ ಕುಮಾರ್ ಗುಪ್ತಾ ಮತ್ತು ಸುರೇಶ್ ಚಂದ್ರ ಅವರನ್ನು ಸಿಐಸಿಯ ಮಾಹಿತಿ ಆಯುಕ್ತರನ್ನಾಗಿ ನೇಮಿಸಲಾಗಿದೆ.
CIC, Chief Information Commissioner, Sudhir Bhargava,oath