ಕೊಚ್ಚಿ:ಪವನ್ ಶೆರಾವತ್ ಅವರ ರೈಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‍ನ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ಫಾಚ್ರ್ಯುನ್ ತಂಡವನ್ನ 41-29 ಅಂಕಗಳ ಭಾರೀ ಅಂತರದ ನೆರವಿನಿಂದ ಭರ್ಜರಿ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತು. ಬುಲ್ಸ್ ಈ ಗೆಲುವಿನ ಜೊತೆಗೆ ಹೊಸ ವರ್ಷದ ಸಂಭ್ರಮ ಇನ್ನಷ್ಟು ಹೆಚ್ಚಿಸುವಂತೆ ಮಾಡಿತು.
ಕೊಚ್ಚಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಬೆಂಗಳೂರು ಬುಲ್ಸ್ 41-29 ಅಂಕಗಳಿಂದ ಜಯ ಸಾಧಿಸಿತು. ಗುಜರಾತ್ ಟೀಂ ಕೂಡ ಬೆಂಗಳೂರು ಬುಲ್ಸ್ಗೆ ಆರಂಭದಲ್ಲಿ ತೀವ್ರ ಪ್ರತಿರೋಧವೊಡ್ಡಿತು. ಆದ್ರೆ ದ್ವಿತಿಯಾರ್ಧದಲ್ಲಿ ಬೆಂಗಳೂರು ತಂಡ ಅದ್ಭುತವಾಗಿ ಆಡಿ ಎದುರಾಳಿಗಳನ್ನು ಮಣ್ಣು ಮುಕ್ಕಿಸಿತು.
ರಾತ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಜಯಶಾಲಿಯಾದ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿತು. ಈ ಮೂಲಕ ಈ ಟೂರ್ನಿಯಲ್ಲಿ ಫೈನಲ್ಗೆ ಎಂಟ್ರಿ ಕೊಟ್ಟ ಮೊದಲು ತಂಡವಾಯಿತು.