ಲಖನೌ: ಉತ್ತರಪ್ರದೇಶದ ಬುಲಂದ್ಶಹರ್ ನಲ್ಲಿ ನಡೆದಿದ್ದ ಗಲಭೆಯಲ್ಲಿ ಹತ್ಯೆಯಾಗಿದ್ದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದ ವ್ಯಕ್ತಿಯೊಬ್ಬಯನ್ನು ಪೊಲೀಸರು ಬಂಧಿಸಿದ್ದಾರೆ.
ಇದರೊಂದಿಗೆ ಬುಲಂದ್ಶಹರ್ ಪೊಲೀಸ್ ಗಲಭೆಯಲ್ಲಿ ನಡೆದ ಅಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದಂತಾಗಿದೆ.
ಬಂಧಿತ ವ್ಯಕ್ತಿಯನ್ನು ಕಲ್ವ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಕೊಡಲಿಯಿಂದ ದಾಳಿ ಮಾಡಿ, ಅವರ ಕೈ ಬೆರಳುಗಳನ್ನು ಕಡಿದಿದ್ದ. ಕೊನೆಗೆ ತಲೆಯ ಮೇಲೂ ಕೊಡಲಿ ಪೆಟ್ಟು ನೀಡಿದ್ದ. ಅದಾದ ನಂತರ ಮತ್ತೊಬ್ಬ ವ್ಯಕ್ತಿ ಪ್ರಶಾಂತ್ ನತ್ತ್ ಎಂಬಾತ ಅಧಿಕಾರಿಯದ್ದೇ ಗನ್ ಕಸಿದು ಶೂಟ್ ಮಾಡಿ ಕೊಂದಿದ್ದ. ಆತನನ್ನು ಡಿ.28ರಂದು ಪೊಲೀಸರು ಬಂಧಿಸಿದ್ದಾರೆ.
Bulandshahr Cop’s Murder, Accused Who Attacked Him With Axe, Arrested