ಅಂಡಮಾನ್-ನಿಕೋಬಾರ್ ಮೂರು ದ್ವೀಪಗಳಿಗೆ ಮರುನಾಮಕರಣ

ನವದೆಹಲಿ: ಅಂಡಮಾನ್-ನಿಕೋಬಾರ್​ ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅಲ್ಲಿನ ಮೂರು ದ್ವೀಪಗಳಿಗೆ ಹೊಸ ನಾಮಕರಣ ಮಾಡಿದ್ದಾರೆ. ಹೊಸ ಹೆಸರ ಪ್ರಧಾನಿ ಮೋದಿ ಅಧಿಕೃತವಾಗಿ ಘೋಷಣೆ ಮಾಡಿದರು.

ನೇತಾಜಿ ಸುಭಾಷ್​ಚಂದ್ರ ಭೋಸ್​ ಅವರು ಪೋರ್ಟ್​ ಬ್ಲೇರ್​ನಲ್ಲಿ ಭಾರತ ಧ್ವಜ ಹಾರಿಸಿದ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅಂಡಮಾನ್ ನಿಕೋಬಾರ್ ಗೆ ಭೇಟಿ ನೀಡಿದ ಮೋದಿ, ಅಲ್ಲಿನ ಮೂರು ದ್ವೀಪಗಳಿಗೆ ಹೊಪ್ಸ ಹೆಸರನ್ನಿಟ್ಟಿದ್ದಾರೆ.

ರೋಸ್​ಲ್ಯಾಂಡ್​ಗೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ದ್ವೀಪ, ನೇಲ್​ ಐಸ್​ಲ್ಯಾಂಡ್​ಗೆ ಶಾಹೀದ್ ದ್ವೀಪ ಮತ್ತು ಹಾವ್ಲಾಕ್​ ದ್ವೀಪಕ್ಕೆ ಸ್ವರಾಜ್​ ದ್ವೀಪವೆಂದು ಮರುನಾಮಕರಣ ಮಾಡಿರುವುದಾಗಿ ಪ್ರಧಾನಿ ಘೋಷಿಸಿದ್ದಾರೆ.

ಇದೇ ವೇಳೆ ಸ್ಮರಣಾರ್ಥ ಅಂಚೆಚೀಟಿ, 75 ನಾಣ್ಯಗಳನ್ನೂ ಬಿಡುಗಡೆ ಮಾಡಿದರು. ಅಲ್ಲದೆ ದಿ.ಬೋಸ್​ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಿದರು. ಅದಕ್ಕೂ ಮೊದಲು ಮರೀನಾ ಪಾರ್ಕ್​ಗೆ ತೆರಳಿದ ಪ್ರಧಾನಿ ಮೋದಿ, 150 ಅಡಿ ಎತ್ತರದಲ್ಲಿ ಭಾರತದ ಧ್ವಜ ಹಾರಿಸಿದರು. ಹಾಗೇ ಅಲ್ಲಿಯೇ ಇದ್ದ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

Prime Minister Narendra Modi,announced renaming of three islands,Andaman and Nicobar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ