ಈಜಿಪ್ಟ್‌ ಗೀಜಾ ಪಿರಮಿಡ್ ಬಳಿ ಟೂರಿಸ್ಟ್ ಬಸ್ ನಲ್ಲಿ ಬಾಂಬ್ ಸ್ಫೋಟ: ನಾಲ್ಕು ಮಂದಿ ಸಾವು

ಕೈರೊ : ಈಜಿಪ್ಟ್‌ನ ಗೀಜಾ ಪಿರಮಿಡ್ ಬಳಿ ಪ್ರವಾಸಿಗರ ಬಸ್‍ನಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಸಾವನ್ನಪ್ಪಿದವರನ್ನು ಮೂವರು ವಿಯೆಟ್ನಾಂ ಪ್ರವಾಸಿಗಳು ಮತ್ತು ಈಜಿಪ್ಟ್ ದೇಶದ ಟೂರ್ ಗೈಡ್ ಎಂದು ಗುರುತಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಟಣೆಯ ಪ್ರಕಾರ ವಿಯೆಟ್ನಾಂನ 11 ಮಂದಿ ಪ್ರವಾಸಿಗಳು ಮತ್ತು ಈಜಿಪ್ಟ್ ನ ಬಸ್ ಚಾಲಕ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಗಾಜಾ ಪಿರಮಿಡ್‍ಗಳ ಬಳಿ ಅಲ್ ಹರಾಮ್ ಜಿಲ್ಲೆಯ ಮರಿಯುತಿಯಾ ರಸ್ತೆಯ ಗೋಡೆಯೊಂದರಲ್ಲಿ ಸ್ಫೋಟ ವಸ್ತು ಇರಿಸಿ ಈ ಕೃತ್ಯ ಎಸಗಲಾಗಿದೆ.

ಬಸ್ಸಿನಲ್ಲಿ 14 ವಿಯೆಟ್ನಾಂ ಮೂಲದ ಪ್ರವಾಸಿಗರು, ಈಜಿಪ್ಟ್ ಮೂಲದ ಓರ್ವ ಚಾಲಕ ಮತ್ತು ಟೂರ್ ಗೈಡ್ ಇದ್ದರು. ಸ್ಫೋಟ ಸಂಭವಿಸಿದ ತಕ್ಷಣವೇ ರಕ್ಷಣಾ ದಳದವರು ಆಗಮಿಸಿದ್ದು, ಸ್ಥಳದಲ್ಲಿ ತನಿಖೆ ನಡೆಯುತ್ತಿದೆ.

Bomb attack on tourist bus, near pyramids, kills at least four people

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ