ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ

ನವದೆಹಲಿ: ಹಲವು ದಿನಗಳಿಂದ ಗಗನ ಮುಖಿಯಾಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಇತ್ತೀಚಿನ ದಿನಗಳಲ್ಲಿ ಇಳಿಕೆಯಾಗುತ್ತಿದ್ದು, ಇಂದು ಕೂಡ ಭಾರೀ ಪ್ರಮಾಣದಲ್ಲಿ ಪೆಟ್ರೋಲ್ ಡೀಸ್ ದರ ಇಳಿಕೆಯಾಗಿದೆ.

ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ 14-22 ಪೈಸೆಯಷ್ಟು ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಪೈಸೆ ಇಳಿಕೆ ನಂತರ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 69.55 ರೂ.ಗಳಿಷ್ಟಿದ್ದು, 14 ಪೈಸೆ ಇಳಿಕೆ ನಂತರ 63.62 ರೂ.ಗೆ ಮಾರಾಟಗೊಳ್ಳುತ್ತಿದೆ.

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿಯೂ ಶುಕ್ರವಾರ ಪೆಟ್ರೋಲ್​, ಡೀಸೆಲ್​ ದರ ಕ್ರಮವಾಗಿ 19 ಮತ್ತು 14 ಪೈಸೆ ಇಳಿಕೆಯಾಗಿ, 70.08 ರೂ. ಮತ್ತು 63.94 ರೂ.ಗೆ ಮಾರಾಟವಾಗುತ್ತಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಲೀ. ಪೆಟ್ರೋಲ್‌ 75.18 ರೂ.ಗೆ ಮಾರಾಟವಾಗುತ್ತಿದ್ದು, 18 ಪೈಸೆ ಕಡಿಮೆಯಾಗಿದೆ. ಇನ್ನು ಡೀಸೆಲ್‌ ಲೀ.ಗೆ 15 ಪೈಸೆ ಕಡಿಮೆಯಾಗಿ 66.57ರೂ.ಗಳಷ್ಟಿದೆ.

ಚೆನ್ನೈನಲ್ಲಿ ಪೆಟ್ರೋಲ್‌ ಲೀ.ಗೆ 20 ಪೈಸೆ ಕಡಿಮೆಯಾಗಿ 72.16 ರೂ.ಗಳಿದ್ದರೆ, ಲೀಟರ್‌ ಡೀಸೆಲ್‌ 15 ಪೈಸೆ ಇಳಿಕೆ ನಂತರ 67.16 .ಗಳಿಗೆ ಮಾರಾಟವಾಗುತ್ತದೆ. ಅದೇರೀತಿ ಕೋಲ್ಕತದಲ್ಲಿಯೂ 71.65 ರೂ.ಗೆ ಪೆಟ್ರೋಲ್‌ ಮಾರಾಟವಾಗುತ್ತಿದ್ದು, ಡೀಸೆಲ್‌ 65.37 ರೂ.ಗಳಷ್ಟಿದೆ.

Petrol prices fall again on Friday, touch fresh lows in 2018

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ