ಶ್ರೀ ಕೃಷ್ಣನ ಸಾನ್ನಿಧ್ಯದಲ್ಲಿ ಆಮೆಗೆ ಅನ್ನ ಪ್ರಾಶನ

ಉಡುಪಿ: ವಿಷ್ಣುವಿನ ದಶಾವತಾರಗಳಲ್ಲಿ ಕೂರ್ಮಾವತಾರವೂ ಒಂದು. ಅಂತಹ ಭಗವಾನ್ ಸ್ವರೂಪಿ ಆಮೆಗೆ ಕೃಷ್ಣ ಸಾನ್ನಿಧ್ಯದಲ್ಲಿ ಯತಿ ಶ್ರೇಷ್ಠರು ಅನ್ನ ಪ್ರಾಶನ ನಡೆಸಿದರು.

ಇದು ಒಂದು ಅಪರೂಪದ ದೃಶ್ಯ ಅಷ್ಟಮಠದ ಯತಿಗಳಲ್ಲಿ ಹಿರಿಯರಾದ ಪೇಜಾವರ ಶ್ರೀಗಳು ಪ್ರೀತಿಯಿಂದ ಅಮೆಗೆ ತುತ್ತು ತಿನ್ನಿಸಿದರು. ಸ್ಥಳೀಯರೊಬ್ಬರ ಮನೆಯಲ್ಲಿ ಸಾಕುತ್ತಿದ್ದ ಅಮೆಯೊಂದನ್ನು ಉಡುಪಿ ಕೃಷ್ಣ ಮಠ ಮಧ್ವ ಸರೋವರದಲ್ಲಿ ಬಿಡಲಾಯಿತು.

ಅದಕ್ಕೂ ಮುನ್ನ ಪರ್ಯಾಯ ಮಠಾಧೀಶರ ಪಲಿಮಾರು ವಿದ್ಯಾಧೀಶ ಶ್ರೀಗಳ ಸಮ್ಮುಖದಲ್ಲಿ ಪೇಜಾವರ ಶ್ರೀ ಅಮೆಗೆ ಕೈತುತ್ತು ನೀಡಿ ತಲೆ ಸವರಿದ್ರು.ನಂತ್ರ ಅಮೆಯನ್ನು ವಿಶಾಲವಾದ ಮಧ್ವ ಸರೋವರದ ಲ್ಲಿ ಬಿಡಲಾಯಿತು.

Udupi,Pejavara sri,Madhva sarovara

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ