ಮುಂಬೈ: ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ದುರಂತ: 5 ಹಿರಿಯ ನಾಗರಿಕರು ಸಾವು

ಮುಂಬೈ: ವಾಣಿಜ್ಯ ನಗರಿ ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಐವರು ಹಿರಿಯ ನಾಗರಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಮುಂಬೈನ ಚೆಂಬೂರ್​ ಉಪನಗರದ ತಿಲಕ್​ನಗರ ಪ್ರದೇಶದ ಗಣೇಶ ಗಾರ್ಡನ್​ ಸಮೀಪ ಇರುವ ಸರ್ಗಮ್​ ಸೊಸೈಟಿ ಕಟ್ಟಡದ 11ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ 15 ಅಗ್ನಿ ಶಾಮಕ ವಾಹನಗಳನ್ನು ಬೆಂಕಿಯನ್ನು ನಂದಿಸಿದ್ದಾರೆ. ಐವರು ಹಿರಿಯ ನಾಗರಿಕರು ಸಾವನ್ನಪ್ಪಿದ್ದಾರೆ.

ಅಗ್ನಿ ಅವಘಡದಲ್ಲಿ ಸುನಿತಾ ಜೋಷಿ (72), ಸುಮನ್​ ಶ್ರೀನಿವಾಸ ಜೋಷಿ (83), ಸರಳಾ ಸುರೇಶ್​ ಗಂಗರ್​ (52), ಬಾಲಚಂದ್ರ ಜೋಷಿ (72) ಮತ್ತು ಲಕ್ಷ್ಮೀಬೆನ್​ ಪ್ರೇಮ್​ಜಿ ಗಂಗರ್​ (83) ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿ ನಂದಿಸುವಾಗ ಅಗ್ನಿ ಶಾಮಕ ಸಿಬ್ಬಂದಿಯೊಬ್ಬರಿಗೂ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿ ಅನಾಹುತಕ್ಕೆ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ. ಬೆಂಕಿ ಹೊತ್ತಿಕೊಂಡ ನಂತರ ಎಲ್​ಪಿಜಿ ಸಿಲಿಂಡರ್​ ಸಿಡಿದು ಬೆಂಕಿ ಇನ್ನಷ್ಟು ವ್ಯಾಪಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Mumbai,Chembur highrise fire, 5 dead

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ