ಇನ್ನೂ ಮುಂದೆ ವಿಮಾನ ನಿಲ್ದಾಣಗಳಲ್ಲಿ ಕನ್ನಡ ಡಿಂಡಿಮ

ನವದೆಹಲಿ: ದೇಶದಲ್ಲಿನ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕ ಹಾಗೂ ಸಾರ್ವಜನಿಕ ಪ್ರಕಟಣೆಯನ್ನು ಮೊದಲು ಸ್ಥಳೀಯ ಭಾಷೆಯಲ್ಲಿ ಹೊರಡಿಸಿ ಅನಂತರ ಹಿಂದಿ ಹಾಗೂ ಇಂಗ್ಲಿಷ್​ನಲ್ಲಿ ಮಾಡಬೇಕು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಆದೇಶಿಸಿದೆ.

ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣಗಳಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ಕನ್ನಡ ಪ್ರಕಟಣೆ ಮೊಳಗಲಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆ ಹೇರಲಾಗುತ್ತಿದೆ ಎಂಬ ಬಲವಾದ ಕೂಗು ವರ್ಷಗಳ ಹಿಂದೆ ಸದ್ದು ಮಾಡಿತ್ತು. ಈ ವೇಳೆ ಕೇಂದ್ರದ ವಿರುದ್ಧ ಕನ್ನಡಪರ ಹೋರಾಟಗಾರರು ಹಾಗೂ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂಬಂಧ ನಾಗರಿಕ ವಿಮಾನ ಯಾನ ಸಚಿವ ಸುರೇಶ್​ ಪ್ರಭಕು ಅವರು ನಿರ್ದೇಶನ ಹೊರಡಿಸಿರುವುದಾಗಿ ವರದಿಯೊಂದು ತಿಳಿಸಿದೆ. ಇದು ಎಲ್ಲ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರಿಗೆ ಅನ್ವಯಿಸುತ್ತದೆ. ಆದರೆ ನಿಶಬ್ದ ವಿಮಾನ ನಿಲ್ದಾಣಗಳಿಗೆ ಈ ನಿರ್ದೇಶನ ಅನ್ವಯಿಸುವುದಿಲ್ಲ.

ವಿಮಾಣ ನಿಲ್ದಾಣಗಳಲ್ಲಿನ ಎಲ್ಲ ಬಾಯಿ (ಮೌತ್​​)  ಪ್ರಕಟಣೆಗಳನ್ನು ಮೊದಲು ಸ್ಥಳೀಯ ಭಾಷೆಯಲ್ಲಿ ಹೊರಡಿಸಬೇಕು. ಅನಂತರ ಹಿಂದಿ ಮತ್ತು ಇಂಗ್ಲಿಷ್​ ಭಾಷೆಗಳಲ್ಲಿ ಮಾಡಬೇಕು ಎಂದು ಹಲವಾರು ಎಎಐಗೆ ಮನವಿ ಸಲ್ಲಿದ್ದರು. ಜನರ ಈ ಅಭಿಪ್ರಾಯವನ್ನು ಪರಿಗಣಿಸಿ ನಾಗರಿಕ ವಿಮಾನ ಯಾನ ಸಚಿವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ