ಶಬರಿಮಲೆ ವಿವಾದ: ದೇವಾಲಯಕ್ಕೆ ಪ್ರಾವೇಶಿಸುತ್ತಿದ್ದ ಮತ್ತಿಬ್ಬರು ಮಹಿಳೆಯರನ್ನು ತಡೆದ ಪ್ರತಿಭಟನಾಕಾರರು

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಯತ್ನಿಸಿದ ಮತ್ತಿಬ್ಬರು ಮಹಿಳೆಯರನ್ನು ಅಯ್ಯಪ್ಪ ಭಕ್ತರು ಮಾರ್ಗ ಮಧ್ಯೆಯೇ ತಡೆದಿರುವ ಘಟನೆ ನಡೆದಿದೆ.

ಕೋಯಿಕೋಡ್‌ನ ದುರ್ಗಾ ಹಾಗೂ ಮಲಪ್ಪುರಂ ಮೂಲದ ಬಿಂದು ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ ಮಹಿಳೆಯರು. ಇವರಿಬ್ಬರು 45 ವರ್ಷದ ಆಸುಪಾಸಿನವರಾಗಿದ್ದಾರೆ ಎಂದು ತಿಳಿದು ಬಂದಿದೆ.

ದೇಗುಲ ಪ್ರವೇಶ ಮಾಡಲು ಮುಂದಾಗಿದ್ದ ಮಹಿಳೆಯರಿಗೆ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು. ಆದರೆ, ಅಪಾರ ಸಂಖ್ಯೆಯಲ್ಲಿರುವ ಅಯ್ಯಪ್ಪನ ಭಕ್ತರು ಪ್ರತಿಭಟನೆ ತೀವ್ರಗೊಳಿಸಿ ಮಹಿಳೆಯರಿಬ್ಬರನ್ನೂ ನಡಪಂದಲ್ ಬಳಿ ತಡೆದಿದ್ದಾರೆ.

ನಿನ್ನೆಯಷ್ಟೇ ತಮಿಳುನಾಡಿನ 11 ಮಹಿಳೆಯರು ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ, ಭಕ್ತರ ತೀವ್ರ ಪ್ರತಿಭಟನೆಗೆ ಬೆದರಿ ದೇವರ ದರ್ಶನ ಪಡೆಯದೆ ವಾಪಸ್ಸಾಗಿದ್ದರು.

Sabarimala row, 2 women stopped 1km from temple

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ