ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಹಾರ, ಕೊಲೆ ಪ್ರಕರಣ: ಅಪರಾಧಿಗೆ ಗಲ್ಲುಶಿಕ್ಷೆ ನೀಡಿದ ಹರ್ಯಾಣ ಕೋರ್ಟ್

ರೆವಾರಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ 19 ವರ್ಷದ ಅಪರಾಧಿಗೆ ಹರಿಯಾಣದ ರೆವಾರಿ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.

ಬಾಲಕಿ ತಂದೆಯ ಸಹದ್ಯೋಗಿ ಯುವಕನೇ 8 ವರ್ಷದ ಬಾಲಕಿ ಮೇಲೆ ಹೀನ ಕೃತ್ಯವೆಸಗಿ ಬಳಿಕ ಆಕೆಯನ್ನು ಹತ್ಯೆ ಮಾಡಿದ್ದ. ಜೂನ್​ನಲ್ಲಿ ಘಟನೆ ನಡೆಸಿದ್ದು ಆರು ತಿಂಗಳಿಂದ ಪ್ರಕರಣದ ವಿಚಾರಣೆ ನಡೆದಿತ್ತು. ತೀರ್ಪು ಪ್ರಕಟಿಸಿರುವ ರೆವಾರಿ ನ್ಯಾಯಾಲಯದ ನ್ಯಾಯಾಧೀಶ ನರೇಶ್​ ಕುಮಾರ್​, ಈ ಘಟನೆ 2012ರ ನಿರ್ಭಯಾ ಘಟನೆಗಿಂತ ಕಡಿಮೆ ಏನೂ ಇಲ್ಲ. ಹಾಗಾಗಿ ಅಪರಾಧಿಗೆ ಮರಣ ದಂಡನೆ ನೀಡಲಾಗಿದೆ ಎಂದಿದ್ದಾರೆ.

ಬವಾಲ್​ ಟೌನ್​ಶಿಪ್​ನ ಮನೆಯಲ್ಲಿ ಬಾಲಕಿ ಒಬ್ಬಳೇ ಇದ್ದದ್ದನ್ನು ತಿಳಿದ ಅಪರಾಧಿ ಆಕೆಗೆ ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರ ಎಸಗಿದ್ದಾನೆ. ಯುವಕ ಬಾಲಕಿ ತಂದೆಯ ಸಹೋದ್ಯೋಗಿ ಮಾತ್ರವಲ್ಲ ಅವರ ಮನೆಯ ಕೊಠಡಿಯೊಂದರಲ್ಲಿ ಬಾಡಿಗೆಗಿದ್ದ.

ಆತನ ಕೃತ್ಯವನ್ನು ವಿರೋಧಿಸಿ ಬಾಲಕಿ ಅಳಲು ಪ್ರಾರಂಭಿಸಿದಾಗ ಆಕೆಯ ಬಾಯಿಯನ್ನು ಮುಚ್ಚಿ, ಕೈ ಕಾಲುಗಳನ್ನು ಕಟ್ಟಿ ಅತ್ಯಾಚಾರ ಮಾಡಿದ್ದಾನೆ. ಆಕೆ ವಿಷಯವನ್ನು ಮನೆಯವರಿಗೆ ತಿಳಿಸಿಬಿಡುತ್ತಾಳೆ ಎಂಬ ಭಯದಲ್ಲಿ ಕೊಲೆ ಮಾಡಿ ಆತನ ಕೊಠಡಿಯಲ್ಲಿದ್ದ ಅಲ್ಮೆರಾದಲ್ಲಿ ಮೃತದೇಹವನ್ನು ಇಟ್ಟಿದ್ದ.

ಬಾಲಕಿ ಪಾಲಕರು ಮನೆಗೆ ಬಂದಾಗ ಮಗಳು ಇಲ್ಲದ್ದನ್ನು ಕಂಡು ಆತನನ್ನು ವಿಚಾರಿಸಿದ್ದಾರೆ. ಆಕೆ ತನ್ನ ಸ್ನೇಹಿತೆ ಮನೆ ಬಳಿ ಹೋಗುತ್ತಿದ್ದನ್ನು ನೋಡಿದೆ ಎಂದು ಸುಳ್ಳು ಹೇಳಿ ಆ ಕ್ಷಣದಿಂದ ಬಚಾವಾಗಿದ್ದಾನೆ. ಮಗಳು ಮನೆಗೆ ಬಾರದಿದ್ದಾಗ ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ. ವಿಚಾರಣೆ ವೇಳೆ ಯುವಕನ ಹೇಳಿಕೆಗೆ ಅನುಮಾನಗೊಂಡ ಪೊಲೀಸರು ಆತನ ಕೊಠಡಿ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿತ್ತು. ಯುವಕನನ್ನು ಬಂದಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಘಟನೆ ಬೆಲಕಿಗೆ ಬದಿತ್ತು.

Teenager gets death penalty, raping, killing eight-year-old girl, Haryana

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ