ಅಪ್ಪಳಿಸುವ ಮುನ್ನವೇ ಅಬ್ಬರಿಸುತ್ತಿದೆ ಫೇಥಾಯ್​; ಆಂಧ್ರದಲ್ಲಿ ಭಾರಿ ವರ್ಷಧಾರೆ !

ವಿಶಾಖಪಟ್ಟಣಂ: ಆಂಧ್ರದ ಪ್ರಮುಖ ಜಿಲ್ಲೆಗಳಾದ ಗುಂಟೂರು, ಕೃಷ್ಣ ಹಾಗೂ ಗೋದಾವರಿಯಲ್ಲಿ ಪೇಥಾಯ್​ ಚಂಡಮಾರುತ ಪರಿಣಾಮ ಭಾರಿ ವರ್ಷ ಧಾರೆಯಾಗುತ್ತಿದೆ.

ಈಗಾಗಲೇ ಚಂಡಮಾರುತ ಆಂಧ್ರದತ್ತ ಧಾವಿಸುತ್ತಿದ್ದು, ಸೋಮವಾರ ಮಧ್ಯಾಹ್ನದ ನಂತರ ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಗಾಳಿ ಹಾಗೂ ಮಳೆಯ ಪರಿಣಾಮ ಹಲವೆಡೆ ಮರ ಬಿದ್ದು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಕಾಕಿನಾಡ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಗಂಟೆಗೆ 150 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ವಿಶಾಖ ಪಟ್ಟಣಂನಿಂದ ದಕ್ಷಿಣದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಆಂಧ್ರದಲ್ಲಿ ಎರಡು ದಿನಗಳ ಕಾಲ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಗಾಳಿ ಹಾಗೂ ಮಳೆಯ ಹಿನ್ನಲೆಯಲ್ಲಿ ಹಲವು ರೈಲುಗಳ ಹಾಗೂ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ತಂಡ ರಕ್ಷಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ