ಏಷಿಯನ್ ಗೇಮ್ಸ್ನಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದ ಕ್ರೀಡಾಪಟುಗಳನ್ನು ಅಭಿನಂದಿಸಿದ ಉಪಮುಖ್ಯಮಂತ್ರಿ

ಬೆಂಗಳೂರು, ಡಿ.15- ಏಷಿಯನ್ ಗೇಮ್ಸ್‍ನಲ್ಲಿ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳನ್ನು ಯುವಜನ ಮತ್ತು ಸೇವಾ ಇಲಾಖೆಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿನಂದಿಸಿದರು.

ಸದಾಶಿವನಗರದ ತಮ್ಮ ಗೃಹ ಕಚೇರಿಯಲ್ಲಿಂದು ಟೆನ್ನಿಸ್ ಆಟಗಾರ ರೋಹನ್‍ಬೋಪಣ್ಣ ಮತ್ತು ಕುರಾಸ್ ಕ್ರೀಡಾಪಟು ಮಲ್ಲಪ್ರಭಾ ಜಾದವ್ ಅವರನ್ನ ಪರಮೇಶ್ವರ್ ಅಭಿನಂದಿಸಿದರು.

ಇತ್ತೀಚೆಗೆ ನಡೆದ ಏಷಿಯನ್ಸ್ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಈ ಇಬ್ಬರು ಕ್ರೀಡಾಪಟುಗಳು ವಿಜೇತರಾಗಿದ್ದಾರೆ.ರೋಹನ್ ಬೋಪಣ್ಣ ಟೆನ್ನಿಸ್ ಡಬಲ್ಸ್‍ನಲ್ಲಿ ಚಿನ್ನದ ಪದಕ ಗಳಿಸಿದ್ದು, ಅವರಿಗೆ 25 ಲಕ್ಷ ರೂ.ವನ್ನು, ಕುಸ್ತಿ ಮಾದರಿಯ ಕುರಾಸ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದ ಮಲ್ಲಪ್ರಭಾ ಜಾದವ್ ಅವರಿಗೆ 8 ಲಕ್ಷ ರೂ. ನಗದು ಪುರಸ್ಕಾರದ ಚೆಕ್ ನೀಡಿ, ಶಾಲು ಹೊದಿಸಿ, ಮೈಸೂರು ಪೇಟ ಧರಿಸಿ ಸನ್ಮಾನಿಸಿದರು.
ಮಲ್ಲಪ್ರಭಾ ಜಾದವ್ ಅವರು ಬೆಳಗಾವಿಯವರಾಗಿದ್ದು, ಯೋಜನಾ ಸೇವೆ ಮತ್ತು ಕ್ರೀಡಾ ಇಲಾಖೆ ನಡೆಸುವ ಹಾಸ್ಟೇಲ್‍ನ ವಿದ್ಯಾರ್ಥಿನಿಯಾಗಿದ್ದಾರೆ.
ಕರ್ನಾಟಕ ಗ್ರ್ಯಾಂಡ್ ಮಾಸ್ಟರ್:

ಕರ್ನಾಟಕ ಮೂಲದ ಇಬ್ಬರೂ ಕ್ರೀಡಾಪಟುಗಳು ಚೆಸ್‍ನಲ್ಲಿ ಗ್ರ್ಯಾಂಡ್ ಮಾಸ್ಟರ್ ಆಗಿ ಪ್ರಶಸ್ತಿ ಪಡೆದುಕೊಂಡಿದ್ದು, ಇಬ್ಬರಿಗೂ ತಲಾ 8 ಲಕ್ಷ ರೂ.ನಗದು ಪುರಸ್ಕಾರ ಘೋಷಿಸಲಾಗಿದೆ.
ಮೈಸೂರಿನ ತೇಜ್‍ಕುಮಾರ್ ಕಳೆದ ವರ್ಷ ಗ್ರ್ಯಾಂಡ್ ಮಾಸ್ಟರ್ ಆಗಿದ್ದರು. ಮತ್ತೊಬ್ಬ ಕ್ರೀಡಾಪಟು ಶಿವಮೊಗ್ಗದ ಸ್ಟ್ಯಾನಿಜಿಯೊ ಅವರು ನಿನ್ನೆಯಷ್ಟೇ ಜಮ್ಮು-ಕಾಶ್ಮೀರದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸ್ಟ್ಯಾನಿಜಿಯೊ ಏಕಲವ್ಯ ಪ್ರಶಸ್ತಿ ಪುರಸ್ಕøತರಾಗಿದ್ದು, ಕ್ರೀಡಾ ಇಲಾಖೆಯ ಪೆÇ್ರೀ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದ್ದಾರೆ.
ಕ್ರೀಡಾ ಪಟುಗಳನ್ನು ಅಭಿನಂದಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ರಾಜ್ಯ ಸರ್ಕಾರ ಕ್ರೀಡೆಗಳಿಗೆ ಹೆಚ್ಚಿನ ಪೆÇ್ರೀ ನೀಡುತ್ತಿದೆ.ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯವನ್ನು ಒದಗಿಸುತ್ತಿದೆ.ಪ್ರತಿ ಜಿಲ್ಲೆಯಲ್ಲೂ ಸಿಂಥಟಿಕ್ ಟ್ರ್ಯಾಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷದೊಳಗಾಗಿ ರಾಜ್ಯದ 30 ಜಿಲ್ಲೆಗಳಲ್ಲೂ ಸಿಂಥಟಿಕ್ ಟ್ರ್ಯಾಕ್‍ಗಳು ಕ್ರೀಡಾಪಟುಗಳಿಗೆ ಲಭ್ಯವಾಗಲಿವೆ ಎಂದರು.
ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕ್ರೀಡೆಗೆ ಪೆÇ್ರೀ ನೀಡುವುದು ಕಡಿಮೆಯಾಗಿದೆ. ಇದನ್ನು ಪೆÇ್ರೀ ರಾಜ್ಯ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ