ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ಎಸ್‍ಎಂಎಸ್ ಕಳುಹಿಸಿದ ಪರಿಣಾಮ ಅನಿಲ್ ಕುಂಬ್ಳೆ ಕೋಚ್ ಹುದ್ದಯಿಂದ ಕೆಳಗಿಳಿಬೇಕಾಯಿತು ಎಂದು ಸುಪ್ರೀಂ ಕೋರ್ಟ್ ನೇಮಿತ ಅಡಳಿತಗಾರರ ಸಮಿತಿ ಸದಸ್ಯೆ ಡೈಯನಾ ಎಡುಲ್ಜಿ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಸಂಬಂಧಿಸಿದಂತೆ ಕೋಚ್ ರಮೇಶ್ ಪವಾರ್ ಅವರ ರಾಜೀನಾಮೆಯಿಂದ ತೆರವಾಗಿರುವ ಕೋಚ್ ಹುದ್ದೆಗೆ ಅಡಳಿತಗಾರರ ಸಮಿತಿ ಅಧ್ಯಕ್ಷೆ ಡೈಯಾನಾ ಎಡುಲ್ಜಿ ಆಡಳಿತಗಾರರ ಮುಖ್ಯಸ್ಥ ವಿನೋದ್ ರಾಯ್‍ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ ವರ್ಷ ಕಳುಹಿಸಿದ ಎಸ್‍ಎಎಸ್‍ನಿಂದಾಗಿ ಅನಿಲ್ ಕುಂಬ್ಳೆ ಅವರ ಬದಲಿಗೆ ರವಿ ಶಾಸ್ತ್ರಿ ಅವರು ಕೋಚ್ ಹುದ್ದೆ ಅಲಂಕರಿಸಬೇಕಾಯಿತೆಂದು ನೆನಪಿಸಿದ್ದಾರೆ.
ಇದೇ ರೀತಿ ಮಹಿಳಾ ತಂಡದ ನಾಯಕಿ ಕೋಚ್ ವಿಷಯವಾಗಿ ಮಾತನಾಡಲು ಅವಕಾಶ ಕೊಡಬೇಕು.ಕೋಚ್ ವಿಯವಾಗಿ ಮಹಿಳಾ ಕ್ರಿಕೆಟರ್‍ಗಳು ಇ- ಮೇಲ್ ಬರೆಯೋದು ತಪ್ಪಲ್ಲ. ಅವರು ತಮ್ಮ ಅಭಿಪ್ರಾಯ ಹೇಳುವಲ್ಲಿ ಪ್ರಮಾಣಿಕರಾಗಿರುತ್ತಾರೆ. ನಾಯಕ ವಿರಾಟ್ ಕೊಹ್ಲಿಯಂತೆ ಕೋಚ್‍ನ್ನ ಬದಲಿಸುವಂತೆ ಸಿಇಒಗೆ ಆಗಾಗ ಎಸ್.ಎಮ್.ಎಸ್ ಕಳಿಸುತ್ತಿಲ್ಲ ಎಂದು ಎಡುಲ್ಜಿ ಆರೋಪಿಸಿದ್ದಾರೆ.
ರವಿ ಶಾಸ್ತ್ರಿಗಾಗಿ ಕೋಚ್ ಹುದ್ದೆಗೆ ನೀಡಲಾಗಿದ್ದ ಸಮಯವಾಕಾಶದಲ್ಲಿ ಅರ್ಜಿ ಹಾಕಿರಲಿಲ್ಲ.ರವಿಶಾಸ್ತ್ರಿಗಾಗಿ ನೇಮಕಾತಿಯನ್ನ ವಿಸ್ತರಿಸಿರುವ ಕ್ರಮವನ್ನ ನಾನು ವಿರೋಧಿಸಿದ್ದೆ. ಅನಿಲ್ ಕುಂಬ್ಳೆ ಅವರೊಬ್ಬ ದಂತ ಕತೆ ಅವರು ಕೋಚ್ ಹುದ್ದೆಯನ್ನ ಕಳೆದುಕೊಳ್ಳಬೇಕಾಯಿತು. ಅವರನ್ನ ವಿಲ್ಲನ್ನಂತೆ ನೋಡಲಾಯಿತು. ಅನಿಲ್ ಕುಂಬ್ಳೆ ಖುಷಿಯಿಂದಲೇ ಎದ್ದು ಹೋದರು ನಾನು ಅದನ್ನ ಗೌರವಿಸುತ್ತೇನೆ ಎಂದು ಎಡುಲ್ಜಿ ನೆನಪಿಸಿಕೊಂಡಿದ್ದಾರೆ.