ಅಡಿಲೇಡ್‍ನಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಜಯ

ಅಡಿಲೇಡ್ : ರೋಚಕತೆಯಿಂದ ಕೂಡಿದ್ದ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ.
ಐದನೇ ದಿನದಾಟದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‍ಗಳು ಕರಾರುವಕ್ ಬೌಲಿಂಗ್ ದಾಳಿ ನಡೆಸಿ ಬೇಕಿದ್ದ ಆರು ವಿಕೆಟ್‍ಗಳನ್ನ ಪಡೆದು ಆತಿಥೇಯ ಆಸ್ಟ್ರೇಲಿಯಾ ತಂಡವನ್ನ 291 ರನ್‍ಗಳಿಗೆ ಕಟ್ಟಿಹಾಕಿ 31 ರನ್‍ಗಳ ಗೆಲುವು ಪಡೆಯಿತು. ಇದರೊಂದಿಗೆ ಟೀಂ ಇಂಡಿಯಾ 10 ವರ್ಷಗಳ ಬಳಿಕೆ ಕಾಂಗರೂ ನಾಡಲ್ಲಿ ಜಯ ಕಂಡಿತು.
ನಾಲ್ಕನೆ ದಿನಾಟದ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‍ನಲ್ಲಿ 307 ರನ್‍ಗಳಿಗೆ ಆಲೌಟ್ ಆಗಿ ಒಟ್ಟು 323 ರನ್‍ಗಳ ಟಾರ್ಗೆಟ್ ನೀಡಿತ್ತು.ದಿನದಾಟದ ಅಂತ್ಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತ್ತು. ಶಾನ್ ಮಾರ್ಷ್ ಅಜೇಯ 31, ಟ್ರಾವೆಸ್ ಹೆಡ್ 14 ರನ್‍ಗಳಿಸಿಕ್ರೀಸ್ ಕಾಯ್ದುಕೊಂಡಿದ್ದರು.
ಅಂತಿಮ ದಿನ ಅಸಿಸ್ ಆಸಿಸ್‍ನ ಎಲ್ಲ ಬ್ಯಾಟ್ಸ್‍ಮನ್‍ಗಳು ಪೆವಿÀಲಿಯನ್ ಸೇರುವ ಮೂಲಕ ಭಾರತಕ್ಕೆ ಶರಣಾದ್ರು. ಅಡಿಲೇಡ್ ಟೆಸ್ಟ್‍ನಲ್ಲಿ ಒಟ್ಟು ಮೊಹ್ಮದ್ ಶಮಿ 5, ಇಶಾಂತ್ ಶರ್ಮಾ 3,ಬೂಮ್ರಾ ಮತ್ತು ಅಶ್ವಿನ್ ತಲಾ 6 ವಿಕೆಟ್ ಪಡೆದು ಮಿಂಚಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ