100 ಕೋಟಿ ಹಿಂದುಗಳ ಬೆಂಬಲದಿಂದ ರಾಮ ಮಂದಿರ ನಿರ್ಮಾಣವಾಗಲಿದೆ: ಗಿರಿರಾಜ್ ಸಿಂಗ್

ನವದೆಹಲಿ: ಸರ್ಕಾರದ ಹಂಗಿನಲ್ಲಿ ರಾಮ ಮಂದಿರವನ್ನು ನಿರ್ಮಿಸುವುದಿಲ್ಲ. ಬದಲಿಗೆ 100 ಕೋಟಿ ಹಿಂದುಗಳ ಎದೆಗಾರಿಕೆಯ ಬೆಂಬಲದಿಂದ ನಿರ್ಮಿಸಲಾಗುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ.

ಮೀರತ್‌ನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿರಿರಾಜ್ ಸಿಂಗ್, 100 ಕೋಟಿ ಹಿಂದುಗಳ ಎದೆಗಾರಿಕೆಯ ಬೆಂಬಲದಿಂದ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತದೆ ಹೊರತು ಸರ್ಕಾರದ ಹಂಗಿನಲ್ಲಲ್ಲ ಎಂದಿದ್ದಾರೆ.

ಅಯೋಧ್ಯೆಯಲ್ಲಿ ಭೂಮಿಯನ್ನು ಎರಡು ಬಾರಿ ಅಗೆಯಲಾಯಿತು. ಆದರೆ ಯಾರೊಬ್ಬರು ಆ ಬಗ್ಗೆ ಮಾತನಾಡಲಿಲ್ಲ. ಈಗ ಮತ್ತೆ ರಾಮ ಮಂದಿರವನ್ನು ನಿರ್ಮಿಸಲಾಗುವುದು. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹೇಳಿಕೆಗೆ ಕಿಡಿಕಾರಿರುವ ಅವರು, ಮಂದಿರವನ್ನು ಎಲ್ಲಿ ಬೇಕಾದರೂ ಕಟ್ಟಬಹುದು ಎಂದಿದ್ದಾರೆ ಆದರೆ ಅವರು ಹಜ್‌ನ್ನು ಬಿಟ್ಟು ಬೇರೆಲ್ಲಿಗಾದರೂ ಹೋಗಬಹುದೇ ಎಂದು ಕೇಳುತ್ತೇನೆ ಎಂದು ಪ್ರಶ್ನಿಸಿದ್ದಾರೆ.

ಈ ಮೊದಲು ಮಾತನಾಡಿದ್ದ ಗಿರಿರಾಜ್‌, ರಾಮಮಂದಿರ ವಿವಾದದಿಂದಾಗಿ ಹಿಂದೂಗಳೂ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನು ಅವರ ತಾಳ್ಮೆಯ ಕಟ್ಟೆ ಹೊಡೆಯುವ ಸಮಯ ಮಾತ್ರ ಇದೆ ಎಂದಿದ್ದರು.

Ayodhya, Ram Mandir,Giriraj singh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ