ಜೇಟ್ಲಿ ವಿರುದ್ಧದ ಪಿಐಎಲ್ ತಳ್ಳಿಹಾಕಿದ ಸುಪ್ರೀಂ

ನವದೆಹಲಿ: ಆರ್‌ಬಿಐ ಬಂಡವಾಳ ಮೀಸಲು ನಿಧಿಗೆ ಸಂಬಂಧಿಸಿದಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪಗಳನ್ನು ಮಾಡಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಈ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ಎಂ.ಎಲ್.ಶರ್ಮ ಅವರಿಗೆ ಸುಪ್ರೀಂಕೋರ್ಟ್ 50,000 ರೂ.ಗಳ ದಂಡ ವಿಧಿಸಿದೆ.

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಇರುವ ಅಂಶಗಳನ್ನು ಪರಿಗಣಿಸಲು ನಮಗೆ ಯಾವ ಕಾರಣಗಳು ಗೋಚರಿಸುತ್ತಿಲ್ಲ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಈ ಅರ್ಜಿಯನ್ನು ವಜಾಗೊಳಿಸಿತು. ಆರ್‌ಬಿಐನ ಬಂಡವಾಳು ಮೀಸಲು ನಿಧಿಯನ್ನು ಕಬಳಿಸಲು ಹಣಕಾಸು ಸಚಿವರು ಸಂಚು ರೂಪಿಸಿದ್ದಾರೆ ಎಂದು ವಕೀಲ ಶರ್ಮ ತಮ್ಮ ಪಿಐಎಲ್ ಅರ್ಜಿಯಲ್ಲಿ ಆರೋಪಿಸಿದ್ದರು.

RBI,Arun jaitley,Supreme court

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ