ಶರದ್ ಯಾದವ್ ಅವರ ಹೇಳಿಕೆ ನನಗೆ ಮಾತ್ರವಲ್ಲ ಮಹಿಳೆಯರಿಗೇ ಅವಮಾನ ಮಾಡಿದಂತೆ: ವಸುಂದರಾ ರಾಜೇ

ಜೈಪುರ: ಜೆಡಿಯು ಮಾಜಿ ನಾಯಕ ಶರದ್ ಯಾವದ್ ಅವರು ತಮ್ಮ ಫಿಟ್ನೆಸ್ ಕುರಿತು ಹೇಳಿಕೆ ನೀಡಿರುವುದರ ವಿರುದ್ಧ ಕಿಡಿಕಾರಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೇಯವರು ಶರದ್ ಯಾದವ್ ಹೇಳಿಕೆಯಿಂದ ತಮಗೆ ಅವಮಾನವಾಗಿದೆ ಎಂದಿದ್ದಾರೆ.

ಯಾದವ್ ಅವರ ಹೇಳಿಕೆಯಿಂದ ನನಗೆ ಮಾತ್ರವಲ್ಲ, ಎಲ್ಲಾ ಮಹಿಳೆಯರಿಗೂ ಅವಮಾನ ಮಾಡಿದಂತಾಗಿದೆ. ಯಾವುದೇ ನಾಯಕರ ವಿರುದ್ಧ ನಾವು ವೈಯಕ್ತಿಕವಾಗಿ ಹೇಳಿಕೆ ನೀಡಿಲ್ಲ. ಇದು ನಾಗರೀಕ ವರ್ತನೆಯಲ್ಲ. ಇಂತಹ ಭಾಷೆ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಂಡು ಮುಂದೆಂದೂ ಈ ರೀತಿ ಆಗದಂತೆ, ಇದೊಂದು ಉದಾಹರಣೆಯಾಗುವಂತೆ ಮಾಡಬೇಕೆಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪ್ರಚಾರವೊಂದರಲ್ಲಿ ಮಾತನಾಡಿದ್ದ ಯಾದವ್ ಅವರು, ವಸುಂದರಾ ರಾಜೇ ಅವರಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಅವರಿಗೆ ಅವರ ಆರೋಗ್ಯ ಹಾಗೂ ದೇಹದ ಸೌಂದರ್ಯದ ಕುರಿತು ಕಾಳಜಿ ವಹಿಸಲು ಸಮಯವೇ ಇಲ್ಲದಂತಾಗಿದೆ. ಆ ಕಾರಣಕ್ಕಾದರೂ ನೀವು ಈ ಬಾರಿ ಬಿಜೆಪಿಗೆ ವಿಶ್ರಾಂತಿ ನೀಡಬೇಕು. ಸಿಎಂ ವಸುಂದರಾ ರಾಜೇ ಬಹಳ ಸುಸ್ತಾಗಿದ್ದಾರೆ. ಅವರಿಗೆ ರಾಜಕೀಯದಿಂದ ಸ್ವಲ್ಪ ಬಿಡುವು ನೀಡೋಣ. ಮೊದಲೆಲ್ಲಾ ಸಣ್ಣಸಣ್ಣಗೆ . ಈಗ ತಮ್ಮ ಬಗ್ಗೆ ಕಾಳಜಿ ವಹಿಸಲು ಬಿಡುವಿಲ್ಲದೆ. ಯಾವ ರೀತಿ ದಪ್ಪಾಗಾಗಿದ್ದಾರೆ ನೋಡಿ. ಆಕೆ ನಮ್ಮ ಮಧ್ಯಪ್ರದೇಶದ ಮಗಳು, ಆಕೆಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯೂ ಹೌದು ಎಂದು ಗೇಲಿ ಮಾಡಿದ್ದರು.

‘I feel insulted,’ Vasundhara Raje on Sharad Yadav’s body shaming

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ