ವಂಚಕ ಮಾತ್ರ ಎನ್ನಬೇಡಿ… ನನಗೂ ಮೈಕಲ್​ ಹಸ್ತಾಂತರಕ್ಕೂ ಸಂಬಂಧವಿಲ್ಲ ಎಂದ ಮಲ್ಯ

ನವದೆಹಲಿ: ಭಾರತೀಯ ಬ್ಯಾಂಕ್​ಗಳಿಂದ ಸಾವಿರಾರು ಕೋಟಿ ರೂ ಸಾಲ ಪಡೆದು, ಈಗ ವಿದೇಶ ದಲ್ಲಿ ನೆಲೆಸಿರುವ ಮದ್ಯದ ದೊರೆ ವಿಜಯ್​ ಮಲ್ಯ ಮತ್ತೆ ಟ್ವೀಟ್​ ಮೂಲಕ ಸಾಲದ ಅಸಲು ಪಾವತಿಸುವುದಾಗಿ ಹೇಳಿದ್ದಾರೆ.

ಅಗಸ್ಟಾವೆಸ್ಟ್​ಲ್ಯಾಂಡ್​ ಡೀಲ್​ನ ಮಧ್ಯವರ್ತಿ ಕ್ರಿಸ್ಚಿಯನ್​ ಮೈಕಲ್​ ದುಬೈನಿಂದ ಭಾರತಕ್ಕೆ  ಹಸ್ತಾಂತರ ಮಾಡಿರುವುದಕ್ಕೂ ನನ್ನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಮತ್ತೊಮ್ಮೆ ಸಾಲದ ಅಸಲು ಹಿಂದಿರುಗಿಸುವೆ, ದಯಮಾಡಿ ಸ್ವೀಕರಿಸಿ ಎಂದು ಮನವಿ ಮಾಡಿದ್ದಾರೆ.
‘ಗೌರವಾನ್ವಿತ ಟೀಕಾಕಾರರೇ, ನನ್ನ ಹಸ್ತಾಂತರದ ತೀರ್ಪಿಗೂ, ದುಬೈನಿಂದಾದ ಇತ್ತೀಚಿನ  ಹಸ್ತಾಂತರಕ್ಕೂ, ನಾನು ಹಣ  ಹಿಂದಿರುಗಿಸುವ  ಹೇಳಿಕೆಗೂ ಯಾವ ಸಂಬಂಧವಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ಎಲ್ಲೇ ಇರಬಹುದು, ನನ್ನ ಕೋರಿಕೆಯೊಂದೇ, ದಯಮಾಡಿ ಹಣ ಪಡೆಯಿರಿ. ನಾನು ಹಣ ದೋಚಿದೆ ಎಂಬ ಬರವಣಿಗೆ ನಿಲ್ಲಬೇಕೆಂದು ಅಪೇಕ್ಷಿಸುತ್ತೇನೆ’ ಎಂದು ಟ್ವೀಟ್​ ಮೂಲಕ ಹೇಳಿದ್ದಾರೆ.

ನಿನ್ನೆಯಷ್ಟೇ ಅವರು ಸಾಲದ ಶೇ100 ಅಸಲನ್ನು ಪಾವತಿಸುವೆ ಎಂದು ಟ್ವೀಟ್​ ಮೂಲಕ ಹೇಳಿದ್ದರು. ಇಂದು ಮತ್ತೆ ಟ್ವಿಟ್ಟರ್​ ನೆರವಿನೊಂದಿಗೆ ತಮ್ಮ ಹೇಳಿಕೆ ವ್ಯಕ್ತಪಡಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ