ಆಪರೇಷನ್ ಕಮಲ; ಶ್ರೀರಾಮುಲು ಆಪ್ತನ ಹೆಸರಲ್ಲಿ 25 ಕೋಟಿಗೆ ಕೈ ಶಾಸಕರ ಖರೀದಿ ಚರ್ಚೆ, ಫೋನ್ ಸಂಭಾಷಣೆ ವೈರಲ್

ಬೆಂಗಳೂರುಆಪರೇಷನ್ ಕಮಲ ವಿಚಾರ ಮತ್ತೆ ಸದ್ದು ಮಾಡಿದೆ. ಬಿಜೆಪಿ ಮುಖಂಡ ಶ್ರೀರಾಮುಲು ಆಪ್ತ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ, ಉದ್ಯಮಿಯೊಂದಿಗೆ ಆಪರೇಷನ್ ಕಮಲ ಬಗ್ಗೆ ಚರ್ಚೆ ನಡೆಸಿದ್ದು, ಬಿಜೆಪಿ ಸೇರುವ ಶಾಸಕರಿಗೆ ಎಷ್ಟು ಹಣ ನೀಡಬೇಕು. ಯಾವಾಗ ಹಣ ತಲುಪಿಸಬೇಕು ಎಂಬುದರ ಕುರಿತು ಮಾತನಾಡಿದ್ದಾರೆ. ಆ ಉದ್ಯಮಿ ದುಬೈ ಮೂಲದವರು ಹಾಗೂ ರಾಮುಲು ಆಪ್ತ ಮಂಜು ಮಾತನಾಡಿದ್ದು ಎನ್ನಲಾಗಿದೆ.

ಅವರ ಸಂಭಾಷಣೆಯಲ್ಲಿ ಕಾಂಗ್ರೆಸ್​ ಹತ್ತು ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದು ಅವರ ಹೆಸರನ್ನು ಹೇಳಲಾಗಿದೆ. ಮತ್ತು ಈ ಎಲ್ಲ ಶಾಸಕರಿಗೆ ಒಬ್ಬೊಬ್ಬರಿಗೆ 20ರಿಂದ 25 ಕೋಟಿ ಹಣ ಹಾಗೂ ಕ್ಯಾಬಿನೆಟ್​ನಲ್ಲಿ ಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಆಡಿವೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದು ನಿಜವೋ, ಸುಳ್ಳೋ ಎಂಬುದನ್ನು ಬಿಜೆಪಿಯೇ ಸ್ಪಷ್ಟಪಡಿಸಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ