ದೆಹಲಿ ವಿವಿಧೆಡೆ ಐಟಿ ದಾಳಿ: 25 ಕೋಟಿ ರೂ ವಶ

ನವದೆಹಲಿ: ದೆಹಲಿಯ ವಿವಿಧ ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸುಮಾರು 25 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆ ಚಾಂದಿನಿ ಚೌಕ್‌ ಪ್ರದೇಶ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಖಾಸಗಿ ಲಾಕರ್‌ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಹವಾಲ ದಂಧೆಕೋರರು ಇಷ್ಟು ಮೊತ್ತದ ಹಣವನ್ನು ಲಾಕರ್‌ಗಳಲ್ಲಿ ಇರಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ

ಈ ನಗದು ಹಣ ದೆಹಲಿ ಮೂಲದ ತಂಬಾಂಕು ವ್ಯಾಪಾರಸ್ಥರು, ರಸಾಯನಿಕ ಮಾರಾಟಗಾರರು ಹಾಗೂ ಒಣ ಹಣ್ಣು ವ್ಯಾಪಾರಿಗಳಿಗೆ ಸೇರಿರಬಹುದು ಎಂದು ಶಂಕಿಸಲಾಗಿದೆ. ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹವಾಲ ಮಧ್ಯವರ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ.

ಈ ವರ್ಷದಲ್ಲಿ ನಡೆದ ಮೂರನೇ ಅತಿ ದೊಡ್ಡ ಐಟಿ ದಾಳಿ ಇದಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 700 ಕೋಟಿ ರೂಪಾಯಿ ಮೊತ್ತದ ಹವಾಲ ದಂಧೆ ನಡೆಸುತ್ತಿದ್ದ ವ್ಯಕ್ತಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 29 ಕೋಟಿ ರೂ ಗಳನ್ನು ವಶಕ್ಕೆ ಪಡೆಯಲಾಗಿತ್ತು.

Income Tax Raid,Delhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ