ಇಬ್ಬರು ಅಂತರಾಜ್ಯ ಕಳ್ಳರ ಬಂಧನ

ಬೆಂಗಳೂರು, ನ.30- ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ಸೋಗಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನು ಪರಪ್ಪನ ಅಗ್ರಹಾರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ತಮಿಳನಾಡು ರಾಜ್ಯ ವೇಲೂರು ಜಿಲ್ಲೆ ಗುಡಿಯಾತಂ ತಾಲೂಕಿನ ಕಾರ್ತಿಕ್‍ಪುರ ಗ್ರಾಮದ ಪಾಂಡಿಯನ್(27),ಚೆನ್ನೈನ ಕಣ್ಣಗೈ ನಗರದ ಅಣ್ಣಾಮಲೈ (25) ಬಂಧಿತ ಆರೋಪಿಗಳು.

ಬಂಧಿತರಿಂದ 569 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಮೂರು ಮನೆಗಳವು ಹಾಗೂ ಒಂದು ಕನ್ನಗಳವು ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಪಾಂಡಿಯನ್ ವಿರುದ್ಧ ತಮಿಳುನಾಡು ರಾಜ್ಯದ ಗುಡಿಯಾತಂ , ಕಾಟ್ಪಾಡಿ, ವೇಲೂರು ಪೆÇಲೀಸ್ ಠಾಣೆಗಳಲ್ಲಿ ಮನೆಗಳವು, ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿದ್ದು, ಗುಡಿಯಾತಂ ಠಾಣೆಯಲ್ಲಿ ಈತನ ವಿರುದ್ಧ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮತ್ತೊಬ್ಬ ಆರೋಪಿ ಅಣ್ಣಾಮಲೈ ವಿರುದ್ಧ ಸಹ ಗುಡಿಯಾತಂ ಮತ್ತು ಚೆನ್ನೈ ನಗರ ಪೆÇಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದೆ.
ನಗರದ ಉಪಪೆÇಲೀಸ್ ಕಮೀಷನರ್ , ಡಾ.ಎಂ.ಬಿ.ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಸಹಾಯಕ ಪೆÇಲೀಸ್ ಕಮೀಷನರ್ ಕೆ.ಎನ್.ರಮೇಶ್ ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಠಾಣೆಯ ಇನ್ಸ್‍ಪೆಕ್ಟರ್ ಬಿ.ಕೆ.ಕಿಶೋರ್‍ಕುಮಾರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ