ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಜೊತೆಗೆ ಮತ್ತೊಂದು ಆರೋಪ

ಬೆಂಗಳೂರು, ನ.29-ಅಕ್ರಮ ಆಸ್ತಿ ಹೊಂದಿದ್ದ ಆರೋಪದಲ್ಲಿ ಎಸಿಬಿಯಿಂದ ದಾಳಿಗೊಳಗಾಗಿ ಅಮಾನತಿನಲ್ಲಿರುವ ಬಿಡಿಎ ಅಧಿಕಾರಿಗಳಾದ ಗೌಡಯ್ಯ ಹಾಗೂ ಟಿ.ಆರ್.ಸ್ವಾಮಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಅವರ ಬೆನ್ನು ಬಿದ್ದಿದೆ.

ಈ ಬಗ್ಗೆ ಅಧಿಕಾರಿಗಳ ಬಗ್ಗೆ ಎಸಿಬಿ ಅಧಿಕಾರಿಗಳಿಂದ ಮಾಹಿತಿ ಮತ್ತು ದಾಖಲೆ ಪಡೆದುಕೊಂಡಿರುವ ಕೇಂದ್ರೀಯ ತಂಡಗಳು ತನಿಖೆ ಆರಂಭಿಸಿವೆ.
ಇಬ್ಬರು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಸ್ಥಿರ ಮತ್ತು ಚರಾಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದವು.ಈ ಬಗ್ಗೆ ಎಸಿಬಿಯಿಂದ ಐಟಿ ಮತ್ತು ಇಡಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ಎಸಿಬಿಯಲ್ಲಿ ದಾಖಲಾಗಿರುವ ಎಫ್‍ಐಆರ್ ಆಧರಿಸಿ ತನಿಖೆ ಆರಂಭಿಸಿರುವ ಐಟಿ ಅಧಿಕಾರಿಗಳು, ಇವರಿಬ್ಬರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ