ಕಾಂಗ್ರೆಸ್ ನಾಯಕರಿಗೆ ವಿಷಯಗಳು ಸಿಗುತ್ತಿಲ್ಲ ಹಾಗಾಗಿ ತಮ್ಮ ತಾಯಿಯನ್ನು ಟೀಕಿಸುತ್ತಿವೆ: ಪ್ರಧಾನಿ ಮೋದಿ

ಭೋಪಾಲ್: ಕಾಂಗ್ರೆಸ್ ಗೆ ನನ್ನ ವಿರುದ್ಧ ಮಾತನಾಡಲು ವಿಷಯಗಳೇ ಸಿಗುತ್ತಿಲ್ಲ. ಅದಕ್ಕಾಗಿ ಈಗ ನನ್ನ ತಾಯಿ ಟೀಕಿಸುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರ ಅಸಹಾಯಕತೆಯನ್ನು ತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಅವರು ರೂಪಾಯಿ ಮೌಲ್ಯವನ್ನು ಪ್ರಧಾನಿ ಮೋದಿ ತಾಯಿಯ ವಯ್ಯಸಿಗೆ ಹೋಲಿಕೆ ಮಾಡಿ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಪ್ರಧಾನಿ, ಕಾಂಗ್ರೆಸ್ ಗೆ ನನ್ನನ್ನು ಎದುರಿಸಲು ತಾಕತ್ತಿಲ್ಲ. ಅದಕ್ಕಾಗಿ ತಮ್ಮ ತಾಯಿಯನ್ನು ನಿಂದಿಸುವ ಮಾತನಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ನಾಯಕರಿಗೆ ನಮ್ಮ ವಿರುದ್ಧ ಮಾತನಾಡಲು ಬೇರೆ ವಿಷಯಗಳು ಸಿಗುತ್ತಿಲ್ಲ. ಚುನಾವಣೆಯಲ್ಲಿ ಟೆವಣಿಯನ್ನೂ ಕಳೆದುಕೊಳ್ಳುವ ಭೀತಿ ಕಾಂಗ್ರೆಸ್ ಗೆ ಆರಂಭವಾಗಿದೆ ಹಾಗಾಗಿ ಈಗ ಬೇರೆಯವರ ತಾಯಿಯ ವಿಷಯವನ್ನು ಎತ್ತಿಕೊಂಡು ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ನ ಕೀಳುಮಟ್ಟದ ರಾಜಕಾರಣವನ್ನು ತಿರಸ್ಕರಿಸುವಂತೆ ಕರೆ ನೀಡಿದರು.

ರಾಜ್ಯದಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಕೈಗೊಂಡಿರುವ ಅಭಿವೃದ್ಧಿಯ ಜತೆಗೆ ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಕೈಗೊಂಡಿರುವ ಅಭಿವೃದ್ಧಿಯ ಕುರಿತು ಜನರು ಹೋಲಿಕೆ ಮಾಡಿ ನೋಡಿ. ಕಾಂಗ್ರೆಸ್ ನ ದುರಾಡಳಿತ, ಬಿಜೆಪಿಯ ಅಭಿವೃದ್ಧಿ ಅರಿವಾಗುತ್ತದೆ ಎಂದರು.

ನಮ್ಮ ಸರ್ಕಾರಕ್ಕೆ ಈ ದೇಶದ 125 ಕೋಟಿ ಜನ ಹೈಕಮಾಂಡ್. ನಮ್ಮದು ಮೇಡಂನಿಂದ ರಿಮೋಟ್ ಕಂಟ್ರೋಲ್ ಸರ್ಕಾರ ಅಲ್ಲ ಎಂದು ಪರೋಕ್ಷವಾಗಿ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಮೇಡಂ ಸರ್ಕಾರದ ಅವಧಿಯಲ್ಲಿ ಶ್ರೀಮಂತರಿಗಾಗಿ ಬ್ಯಾಂಕ್ ಗಳ ಬೊಕ್ಕಸಗಳನ್ನು ಖಾಲಿ ಮಾಡಿದ್ದರು. ಆದರೆ ನಮ್ಮ ಸರ್ಕಾರ ಅಗತ್ಯವಿರುವ ಯುವಕರಿಗೆ ಸಾಲ ನೀಡುತ್ತಿದೆ ಎಂದರು.

PM Modi,Madhya pradesh,Electiona rally,congress,raj babbar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ