ಭ್ರಷ್ಟಾಚಾರ ಖಾಯಿಲೆ ನಿರ್ಮೂಲನೆಗೆ ನೋಟ್ ಬ್ಯಾನ್ ಔಷಧಿ ನೀಡಲಾಯಿತು: ಪ್ರಧಾನಿ ಮೋದಿ

ಭೋಪಾಲ್: ದೇಶದಲ್ಲಿ ಬಲವಾಗಿ ಬೇರೂರಿದ್ದ ಭ್ರಷ್ಟಾಚಾರ ವ್ಯವಸ್ಥೆಯನ್ನು ಬುಡಸಮೇತ ಕಿತ್ತುಹಾಕಿ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೋಟು ಅಮಾನ್ಯೀಕರಣ ಎಂಬ ಔಷಧಿಯನ್ನು ನೀಡಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಾಬ್ವಾದಲ್ಲಿ ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕಷಾಯ ರೀತಿಯಲ್ಲಿ ನೋಟ್ ಅಮಾನ್ಯತೆಯನ್ನು ಬಳಸಲಾಗಿದೆ ಎಂದರು.

ಕಾರ್ಖಾನೆ, ಕಚೇರಿ, ಮನೆ ಹಾಗೂ ಹಾಸಿಗೆ ಅಡಿಯಲ್ಲಿ ಹಣ ಇಟ್ಟಿದ್ದ ಜನರು ಇಂದು ಪ್ರತಿಯೊಂದು ಪೈಸೆಗೆ ತೆರಿಗೆ ಕಟ್ಟುವಂತಾಗಿದೆ. ಈ ಹಣವನ್ನು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಉಪಯೋಗಿಸಲಾಗಿದೆ ಎಂದು ಹೇಳಿದರು.

2022ರೊಳಗೆ ರೈತರ ಆದಾಯ ದುಪ್ಪಟ್ಟುಗೊಳಿಸಲಾಗುವುದು ಎಂದು ಭರವಸೆ ನೀಡಿದ ಪ್ರಧಾನಿ, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಯಾವುದೇ ಗ್ಯಾರಂಟಿ ಇಲ್ಲದೆ 14 ಕೋಟಿ ಜನರಿಗೆ ಕೇಂದ್ರಸರ್ಕಾರ ಸಾಲ ನೀಡಿದೆ ಎಂದರು.

PM Modi,Demonetisation Was A “Bitter Medicine” To Treat Corruption

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ