ಮಹಾರಾಷ್ಟ್ರದ ಸೇನಾ ಡಿಪೋದಲ್ಲಿ ಸ್ಫೋಟ: 6 ಜನರ ಸಾವು

ವಾರ್ಧಾ: ಮಹಾರಾಷ್ಟ್ರದ ಪುಲ್ಗಾಮಾದ ಸೇನಾ ಡಿಪೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ 6 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ನಾಗಪುರದಿಂದ 80 ಕಿಮೀ ದೂರದಲ್ಲಿರುವ ವಾರ್ಧಾದ ಸೇನಾ ಫೈರಿಂಗ್‌ ಪ್ರದೇಶದಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದರೆ, ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಆರ್ಟಿಲರಿ ಶೆಲ್ ಹೊರತೆಗೆಯುವಾಗ ಸ್ಫೋಟ ಸಂಭವಿಸಿದ್ದೇ ದುಂರಂತಕ್ಕೆ ಕಾರಣ ಎಂದು ಸೇನಾ ಮೂಲಗಳು ತಿಳಿಸಿವೆ. ಮೃತರನ್ನು ಶಸ್ತ್ರಾಸ್ತ್ರ ನಿರ್ಮಾಣ ಕಾರ್ಖಾನೆಯ ಉದ್ಯೋಗಿ ಹಾಗೂ ಐವರು ಕಾರ್ಮಿಕರು ಎಂದು ತಿಳಿದುಬಂದಿದೆ.

ಅಂತೆಯೇ ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

23 ಎಂಎಂ ಫಿರಂಗಿಯನ್ನು ವಿಲೇವಾರಿಗಾಗಿ ಕೆಳಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಫಿರಂಗಿಯನ್ನು ನಾಗ್ಪುರದಿಂದ 80 ಕಿ.ಮೀ. ದೂರದ ಪುಲ್ ಗಾಂವ್ ಸೇನಾ ಡಿಪೋದಿಂದ ವಿಶಾಲ ಮೈದಾನಕ್ಕೆ ಕೊಂಡೊಯ್ಯಲಾಗಿತ್ತು. ಈ ವೇಳೆ ಅವಧಿ ಮುಗಿದ ಶೆಲ್ ಸ್ಛೋಟಗೊಂಡಿದೆ ಎಂದು ಹೇಳಲಾಗಿದೆ.

6 Dead, Many Injured In Explosion Near Ordnance Depot In Maharashtra

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ