ರಾಜಸ್ಥಾನ: ಸಿಎಂ ವಸುಂದರಾ ರಾಜೇ ವಿರುದ್ಧ ಕಾಂಗ್ರೆಸ್ ನಿಂದ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಕಣಕ್ಕೆ

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಅಧಿಕಾರದ ಗದ್ದುಗೆಗೇರಲೇಬೇಕೆಂದು ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಭಾರೀ ರಣ ತಂತ್ರ ರೂಪಿಸಿದ್ದು, ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ವಸುಂದರಾ ರಾಜೇ ವಿರುದ್ಧ ಕಾಂಗ್ರೆಸ್ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಿದೆ.

ಕಳೆದ ತಿಂಗಳಷ್ಟೇ ಕಾಂಗ್ರೆಸ್’ಗೆ ಸೇರ್ಪಡೆಯಾಗಿದ್ದ ಮನ್ವೇಂದ್ರ ಸಿಂಗ್ ಅವರು ಡಿ.7 ರಂದು ನಡೆಯುವ ಚುನಾವಣೆಗೆ, ಸಿಎಂ ರಾಜೇ ಸ್ಪರ್ಧಿಸಿರುವ ಜಲ್ವಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಜಲ್ವಾರ್ ವಿಧಾನಸಭಾ ಕ್ಷೇತ್ರದಲ್ಲಿ 2003ರಿಂದಲೂ ವಸುಂದರಾ ರಾಜೇಯವರು ಸ್ಪರ್ಧಿಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಅದೇ ಕ್ಷೇತ್ರದಿಂದ ಮನ್ವೇಂದ್ರ ಸಿಂಗ್ ಕಣಕ್ಕಿಳಿಸುವ ಮೂಲಕ ಭಾರೀ ಪೈಪೋಟಿಗೆ ಸಜ್ಜಾಗಿದೆ.

Rajastan Poll,BJP,Vasundara raje,Congress,Manvendar singh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ