ರಾಜಸ್ತಾನದ ಕಾಂಗ್ರೆಸ್ ನಾಯಕಿ ಸ್ಪರ್ಧಾ ಚೌದರಿ ಪಕ್ಷದಿಂದ ಉಚ್ಛಾಟನೆ

ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ರಾಜಸ್ತಾನದ ಕಾಂಗ್ರೆಸ್ ಮುಖಂಡೆ ಸ್ಪರ್ಧಾ ಚೌದರಿಯನ್ನು 6 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ.

ರಾಜಸ್ತಾನದ ಪುಲೇರಾದಿಂದ ಸ್ಪರ್ಧಿಸಲು ಬಯಸಿದ್ದ ಸ್ಪರ್ಧಾ ಚೌದರಿ ಅವರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬೆಳಗ್ಗೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮನೆ ಮುಂಭಾಗ ಚೌದರಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಪುಲೇರಾ ಕ್ಷೇತ್ರದಿಂದ ವಿದ್ಯಾಧರ್ ಚೌದರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ತಮ್ಮನ್ನು ಕಡೆಗಣಿಸುತ್ತಿದ್ದು, ಟಿಕೆಟ್ ಹಂಚಿಕೆಯಲ್ಲಿ ಹಣ ಪಡೆಯಲಾಗಿದೆ ಎಂದು ಸ್ಪರ್ಧಾ ಚೌದರಿ ಆರೋಪಿಸಿದ್ದರು.

ಡಿಸೆಂಬರ್ 7 ರಂದು ನಡೆಯಲಿರುವ ಚುನಾವಣೆಗಾಗಿ 32 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಇಂದು ಬಿಡುಗಡೆಗೊಳಿಸಿದೆ.

Rajastan Poll, Congress , Spardha chaudhary

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ